ಚಿಕ್ಕಬಳ್ಳಾಪುರ : ಕದ್ದು ಪರಾರಿಯಾಗುತ್ತಿರುವ ಕಳ್ಳರ ಕಾರು ಅಪಘಾತ ವಾಗಿದ್ದು ಒಬ್ಬ ಕಳ್ಳ ಮೃತಪಟ್ಟ ಘಟನೆ ಶಿಡ್ಲಘಟ್ಟ ತಾಲೂಕಿನ ಮಳಮಾಚನಹಳ್ಳಿ ಗ್ರಾಮದ ಬಳಿ ನಡೆದಿದೆ.
ಮಾರುತಿ ೮೦೦ ಕಾರು ಅಪಘಾತ ಕಳ್ಳ ಸಿದ್ದೇಶ್ (20) ಸಾವನಪ್ಪಿದವನದೆಂದು ತಿಳಿದುಬಂದಿದೆ.
ಚಾಕು ತೋರಿಸಿ ಬೆದರಿಸಿ ಕಳ್ಳರು ಹಾರಡಿ ಬಳಿ ಕಾರ್ಮಿಕರ ಬಳಿ ಮೂವರು ಮೊಬೈಲ್ ಕದ್ದು ಪರಾರಿಯಾಗಿದ್ದರು. ಕದ್ದು ಪರಾರಿಯಾಗುವಾಗ ಮಾರುತಿ ೮೦೦ ಕಾರು ಅಪಘಾತವಾಗಿದೆ. ಗಾಯಗೊಂಡಿರುವ ಮತ್ತೋರ್ವ ಕಳ್ಳ ವೈಶಾಖ್ ಅಲಿಯಾಸ್ ಶಿವಕುಮಾರ್ ಶಿಡ್ಲಘಟ್ಟ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


