ಚಿಕ್ಕಬಳ್ಳಾಪುರ : ಕೌಟುಂಬಿಕ ಕಲಹ ಹಿನ್ನಲೆ ಚಾಕುವಿನಿಂದ ಅತ್ತೆಯ ಕತ್ತು ಸೀಳಿ ಕೊಲೆಗೈದ ಘಟನೆ ಚಿಂತಾಮಣಿ ತಾಲ್ಲೂಕಿನ ಬಿಂಗಾನಹಳ್ಳಿ ಗ್ರಾಮದಲ್ಲಿ ಘಟನೆ .
43 ವರ್ಷದ ಕವಿತಮ್ಮ ಕೊಲೆಯಾದ ಮೃತ ದುರ್ದೈವಿ ,30 ವರ್ಷದ ಚಂದ್ರು ಕೊಲೆಗೈದ ಅಳಿಯ.
ನೆನ್ನೆ ರಾತ್ರಿ ಈ ಘಟನೆ ನಡೆದಿದ್ದು ಕುಡಿದ ಮತ್ತಿನಲ್ಲಿ ಅಳಿಯ ಚಂದ್ರು ಅತ್ತೆ ಕವಿತಮ್ಮ ಹಾಗೂ ಮಾವ ಈಶ್ವರಪ್ಪ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದ ನಂತರ ಅತ್ತೆ ಕವಿತಮ್ಮ ಮೇಲೆ ಚಾಕುವಿನಿಂದ ಇರಿದು ಕೊಲೆಮಾಡಿದ್ದಾನೆ. ಘಟನೆಯಲ್ಲಿ ಮಾವ ಈಶ್ವರಪ್ಪ ಗೆ ಗಂಭೀರ ಗಾಯಗೊಂಡಿದ್ದು ಘಟನೆಯ ನಂತರ ಅಳಿಯ ಚಂದ್ರು ಪರಾರಿಯಾಗಿದ್ದಾನೆ
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಬಿಂಗಾನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಹಾಗೂ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.