ಚಿಕ್ಕಬಳ್ಳಾಪುರ ; ರಾಶ್ಚೆರುವು ಗ್ರಾಮ ಪಂಚಾಯಿತಿ ಪಿಡಿಓ ಅಶೋಕ್ರಿಂದ ಅಶ್ಲೀಲ ಮೆಸೇಜ್ ರವಾನೆಯಾಗಿದ ಆರೋಪದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಖಾಲಿ ಚೆಕ್ಗೆ ಸಹಿ ಹಾಕುವಂತೆ ಅಧ್ಯಕ್ಷೆ ರೇವತಿಗೆ ಬೆದರಿಕೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಚೇಳೂರು ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ I LOVE YOU ಎಂದು ಅಶ್ಲೀಲ ಮೆಸೇಜ್ ಕಳಿಸಿರೋ ಆರೋಪ ಕೇಳಿ ಬಂದಿದೆ. ರಾಶ್ಚೆರುವು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿಗೆ ಪಿಡಿಓ ಅಶೋಕ್ ಎಂಬುವವರು I LOVE YOU ಎಂದು ಮೆಸೇಜ್ ಕಳುಹಿಸಿದ್ದಾರೆ.ಈಗಾಗಲೇ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಮದುವೆಯಾಗಿದೆ. ಅಲ್ಲದೇ ಪಿಡಿಓ ಆಗಿರೋ ಅಶೋಕ್ಗೂ ಮದುವೆಯಾಗಿದೆ. ಅಲ್ಲದೇ ಗ್ರಾ. ಪಂ. ಅಧ್ಯಕ್ಷೆ ರೇವತಿಗೆ ಅಶ್ಲೀಲ ಮೆಸೇಜ್ ಹಾಗೂ ಖಾಲಿ ಚೆಕ್ಗಳಿಗೆ ಸಹಿ ಹಾಕುವಂತೆ ಅಶೋಕ್, ಮಾಜಿ ಅಧ್ಯಕ್ಷೆ ನೀಲಾವತಿ ಪತಿ ಎ ಎನ್ ಬಾಬು ರೆಡ್ಡಿ, ಹಾಲಿ ಸದಸ್ಯ ನಾಗೇಶ್ ಹಾಗೂ ಭಾನು ಪ್ರಕಾಶ್ ಎಂಬುವವರಿಂದ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪ ಕೇಳಿ ಬಂದಿದೆ.ಹೀಗಾಗಿ ನಾಲ್ವರ ವಿರುದ್ಧ ಚೇಳೂರು ಪೊಲೀಸ್ ಠಾಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ದೂರು ನೀಡಿದ್ದಾರೆ. ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.


