Friday, March 6, 2026
Flats for sale
Homeಕ್ರೈಂಚಿಕ್ಕಬಳ್ಳಾಪುರ : ಅನೈತಿಕ ಸಂಬಂಧ,ಮಹಿಳೆಯ ಬರ್ಬರ ಕೊಲೆ ತಮಿಳುನಾಡು ಮೂಲದ ಪ್ರಿಯಕರ ಪರಾರಿ.

ಚಿಕ್ಕಬಳ್ಳಾಪುರ : ಅನೈತಿಕ ಸಂಬಂಧ,ಮಹಿಳೆಯ ಬರ್ಬರ ಕೊಲೆ ತಮಿಳುನಾಡು ಮೂಲದ ಪ್ರಿಯಕರ ಪರಾರಿ.

ಚಿಕ್ಕಬಳ್ಳಾಪುರ : ಎಲ್ಲರೂ ಜೀವನದಲ್ಲಿ ಆಯುಷ್ಯ ,ಅರೋಗ್ಯ ಅಂತ ದೇವರಲ್ಲಿ ಪ್ರಾಥಿಸುವುದು ಇದ್ದೆ ಇದೆ. ಆದರೆ ಈಗಿನ ಜಮಾನ ದಲ್ಲಿ ಎಲ್ಲಿ ಕೊಲೆ ,ಎಲ್ಲಿ ಸುಲಿಗೆ ,ಎಲ್ಲಿ ಅತ್ಯಾಚಾರ ಬರಿ ಇಂಥದ್ದೇ ಸುದ್ದಿ. ದುಡ್ಡು ಎಲ್ಲಾ ಕೆಲಸ ಮಾಡುತ್ತೆ ಎಂಬುದು ಈಗಿನ ಪ್ರತಿಯೊಬ್ಬರ ಜೀವನ ಶೈಲಿಯಲ್ಲಿ ತಿಳಿಯೊತ್ತೆ.

ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣ ಚಿಕ್ಕಬಳ್ಳಾಪುರ ನಗರದ ಚಾಮರಾಜಪೇಟೆ ಪರಾರಿವಾರ್ಡ್‌ನಲ್ಲಿ ನಡೆದಿದೆ.ತಮಿಳುನಾಡು ಮೂಲದ ಪ್ರಿಯಕರ ದಿವಾಕರ್‌ ಎಂಬಾತ ಕೊಲೆ ಮಾಡಿ ಬಾಡಿಗೆ ರೂಮ್‌ನಲ್ಲಿ ಕತ್ತು ಕೊಯ್ದು ಬೀಗ ಹಾಕಿ ಹೋಗಿರುವ ಘಟನೆ ವಾರಿಯಾಗಿದೆ .

ಮೃತರನ್ನು ದೀಪಾ (40) ವಿವಾಹಿತ ಮಹಿಳೆ ಎಂದು ತಿಳಿದುಬಂದಿದೆ.ಮೃತ ದೀಪಾಳನ್ನು ಬಾಗೇಪಲ್ಲಿ ತಾಲೂಕಿನ ಜೂಲಪಾಳ್ಯಾಗೆ ಮದುವೆ ಮಾಡಿಕೊಡಲಾಗಿತ್ತು. ಮಕ್ಕಳ ಜೊತೆ ತವರು ಮನೆ ಚಿಕ್ಕಬಳ್ಳಾಫುರದಲ್ಲಿ ವಾಸವಿದ್ದ ದೀಪಾಳಿಗೆ ತನ್ನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ದೀವಾಕರ್ ಜೊತೆ ಅನೈತಿಕ ಸಂಬಂಧ ಇತ್ತು ಎನ್ನುವ ಆರೋಪ ಕೇಳಿಬಂದಿದೆ. ಆಗಾಗ ಪ್ರೀಯಕರ ದಿವಾಕರ್ ರೂಮಿಗೆ ಬಂದು ಹೋಗುತ್ತಿದ್ದಳು. ಇತ್ತೀಚೆಗೆ ರೂಮ್​ಗೆ ಬಂದಿದ್ದಾಗ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ದೀಪಾಳನ್ನು ದಿವಾಕರ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ರೂಮ್​ನಿಂದ ಕೆಟ್ಟ ವಾಸನೆ ಬರುತ್ತಿರುವ ಹಿನ್ನೆಲೆ ಅನುಮಾನಗೊಂಡ ಕಟ್ಟಡದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ರೂಮ್​ ಪರಿಶೀಲಿಸಿದಾಗ ಕೊಲೆ ಪ್ರಕರಣ ಬೆಳಕಿಗೆಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಫುರ ಎಸ್​ಪಿ ಡಿ.ಎಲ್.ನಾಗೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೂಮ್​ ಮಾಲಿಕರಿಂದ ಮಾಹಿತಿ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular