ಚಾಮರಾಜನಗರ ; ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಪ್ರಶಸ್ತಿ ಪತ್ರದ ಮೇಲೆ ಯೇಸುಕ್ರಿಸ್ತನ ಫೋಟೋ ಹಾಕಲಾದ ಘಟನೆ ನಡೆದಿದೆ.
ಕ್ರಿಸ್ತರಾಜ ಪದವಿ ಪೂರ್ವ ಕಾಲೇಜು ಮತ್ತು ಸೆಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಹನೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಇದೇ ತಿಂಗಳು ಆಗಸ್ಟ್ 9 ರಂದು ಆಯೋಜಿಸಲಾಗಿತ್ತು. ಆಗಸ್ಟ್ 09 ರಂದು ನಡೆಸಿದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಗಿದೆ. ಪ್ರಶಸ್ತಿ ಪತ್ರದಲ್ಲಿ ಕರ್ನಾಟಕ ಕ್ರೀಡಾ ಕೂಟದ ಲೋಗೊವನ್ನ ಮುದ್ರಿಸದೆ ಯೇಸುಕ್ರಿಸ್ತನ ಫೋಟೊವನ್ನ ಮುದ್ರಿಸಿ ಕ್ರೀಡಾ ಕೂಟದಲ್ಲಿ ಮುದ್ರಿಸಲಾಗಿದೆ.ಯೇಸುಕ್ರಿಸ್ತನ ಫೋಟೋ ಇರುವ ಪ್ರಶಸ್ತಿ ಪತ್ರ ವೈರಲ್ ಆಗುತ್ತಿದ್ದಂತೆ ಎಚ್ಚತ್ತ ಶಾಲಾ ಇಲಾಖೆ, ಕಾಲೇಜು ಆಡಳಿತ ಮಂಡಳಿಗೆ ನೋಟಿಸ್ ಕಳಹುಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಿದೆ.
ಈ ಬಗ್ಗೆ ಮಾತನಾಡೈದ ಡಿಡಿಪಿಐ ಮಂಜುನಾಥ್ 700 ಸರ್ಟಿಫಿಕೆಟ್ಗೆ ಸಹಿ ಮಾಡುವ ಜವಾಬ್ದಾರಿ ನನ್ನದು. ನನ್ನ ಸಹಿಯನ್ನು ಸ್ಕ್ಯಾನ್ ಮಾಡಿ ವಾಟ್ಸಾಪ್ನಲ್ಲಿ ಕಳುಹಿಸಿದ್ದೆ. ನನ್ನ ಗಮನಕ್ಕೆ ಬಾರದೆ ನನ್ನ ಸಹಿಯನ್ನು ಹಾಕಲಾಗಿದೆ. ಈಗಾಗಲೇ ಕಾಲೇಜು ಆಡಳಿತ ಮಂಡಳಿಗೆ ನೋಟಿಸ್ ಕೊಟ್ಟಿದ್ದೇವೆ. ವಿತರಣೆಯಾಗಿರುವ ಎಲ್ಲ ಪ್ರಮಾಣ ಪತ್ರವನ್ನು ಹಿಂಪಡೆದಿದ್ದೇವೆ ಎಂದು ಹೇಳಿದರು. ಧರ್ಮಕ್ಕೆ ಸೀಮಿತವಾಗಿಲ್ಲ ಇದು ಸರ್ಕಾರಿ ಆಯೋಜಿತ ಕಾರ್ಯಕ್ರಮ. ಇತರೆ ಧರ್ಮದ ವಿದ್ಯಾರ್ಥಿಗಳ ಧರ್ಮಕ್ಕೆ ಧಕ್ಕೆ ಉಂಟಾಗುವ ರೀತಿ ಲೋಗೋ ಹಾಕಿಸಿದ್ದೀರಿ. ಇದು ಸರ್ಕಾರದ ನೀತಿ ನಿಯಮದ ಉಲ್ಲಂಘನೆಯಾಗಿದೆ. ನೋಟಿಸ್ ತಲುಪಿದ ಮೂರು ದಿನದ ಒಳಗಾಗಿ ಸಮಂಜಸ ಉತ್ತರ ನೀಡುವಂತೆ ಇಲಾಖೆ ಎರಡೂ ಕಾಲೇಜಿಗೆ ಸೂಚಿಸಿದೆ.