ಚಾಮರಾಜನಗರ ; ಇತ್ತೀಚಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಹಲವು ಜನರು ಸಾವನಪ್ಪಿದ್ದು ಇದೀಗ ಅಘಾತಕಾರಿ ಘಟನೆ ಚಾಮರಾಜನಗರ ದಲ್ಲಿ ನಡೆದಿದೆ.
ಕಳೆದ ೧೫ ದಿನಗಳಿಂದ ಚಾಮರಾಜನಗರದ ಹೆಗ್ಗವಾಡಿಪುರ,ದೇಶವಳ್ಳಿ ಗ್ರಾಮದ ಸುತ್ತಮುತ್ತ ಮೈಕ್ರೋ ಫೈನಾನ್ಸ್ ರವರಿಂದ ಸಾಲ ಪಡೆದಿ ಹಣ ಪಾವತಿಸಲು ವಿಳಂಬವಾದ ಹಿನ್ನೆಲೆ ಸಾಲಗಾರರು ಮನೆಗೆ ನುಗ್ಗಿ ಕೀಳು ಪದ ಬಳಸಿ ಬೈದಿದ್ದರಿಂದ ಕಿರುಕುಳಕ್ಕೆ ಹೆದರಿ ನೂರಾರು ಕುಟುಂಬ ಊರು ತೊರೆದಿದ್ದಾರೆಂದು ಮಾಹಿತಿ ದೊರೆತಿದೆ.
ಮನೆ ಕರ್ಚು ವೆಚ್ಚ ಸರಿದೂಗಿಸಲು ಊರಿನವರು ಫೈನಾನ್ಸ್ ಗಳಿಂದ ಸಾಲ ಪಡೆದ ಹಿನ್ನೆಲೆ ಮರುಪಾವತಿ ಮಾಡಲು ಆಗದ ಹಿನ್ನೆಲೆ ಊರನ್ನು ಬಿಟ್ಟು ಹೋಗಿದ್ದಾರೆ.ಇದರಿಂದ ಮಕಳ ವಿದ್ಯಾಭ್ಯಾಸಕ್ಕೂ ಭಾರೀ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಈ ಅಘಾತಕಾರಿ ಘಟನೆಯಿಂದ ಅಧಿಕಾರಿಗಳು ತಲೆಕೆಡಿಕೊಳ್ಳದೆ ಇರುವುದು ಖೆದಕರ.ಪ್ರಕರಣ ಬೆಳಕಿಗೆ ಬೆನ್ನಲ್ಲೇ ಈ ಬಗ್ಗೆ ಪರಿಶೀಲಿಸಿ ಸಮಗ್ರ ವರದಿ ನೀಡಲು ಜಿಲ್ಲಾಡಳಿತ ಶುಕ್ರವಾರ ನಾಲ್ಕು ಅಧಿಕಾರಿಗಳ ತಂಡ ರಚಿಸಿದೆ ಎಂದು ಮಾಹಿತಿ ದೊರೆತಿದೆ.