ಚಳ್ಳಕೆರೆ : ತಾಲ್ಲೂಕಿನ ಗಿಡ್ಡಾಪುರ ಗ್ರಾಮದ ನಿವಾಸಿ ಟಿ. ತಿರುಮಲೇಶ್ ಆಟೋದಲ್ಲಿ ಪ್ರಯಾಣಿಕರನ್ಮು ಕರೆದೊಯ್ಯುವಾಗ ತಿಪ್ಪೇಸ್ವಾಮಿ ನಾಯಕನಹಟ್ಟಿಗೆ ಸಿಲಿಂಡರ್ ತುಂಬಿಸಿಕೊಂಡು ಬರಲು ಹೋಗುತ್ತಿದ್ದಾಗ ನಾಯಕನಹಟ್ಟಿ ಯ ಕೆಇಬಿ ಕಚೇರಿಯ ಮುಂದೆ ಹಾದುಹೋಗುವ ನಾಯಕನಹಟ್ಟಿ ತಳಕು ರಸ್ತೆಯಲ್ಲಿ ಆಟೋ ಚಾಲಕ ತನ್ನ ಆಟೋವನ್ನು ಅತೀ ವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿರುವಾಗ ನಾಯಿ ಅಡ್ಡ ಬಂದಿದ್ದು, ನಾಯಿಯನ್ನು ತಪ್ಪಿಸಲು ಹೋಗಿ ರಸ್ತೆಯ ಎಡಬದಿಗೆ , ಆಟೋ ಪಲ್ಟಿ ಹೊಡಿದ ಪರಿಣಾಮ ನಾಯಕನಹಟ್ಟಿ, ಗಿಡ್ಡಾಪುರ ಗ್ರಾಮದ ನಿವಾಸಿತಿಪ್ಪೇಸ್ವಾಮಿ (38) ಮೃತಪಟ್ಟಿದ್ದಾರೆ.
ಪರಿಣಾಮ ಆಟೋ ಜಖಂಗೊಂಡು ಆಟೋದಲ್ಲಿ ಪ್ರಯಾಣಿಸುತ್ತಿದ್ದ ತಿಪ್ಪೇಸ್ವಾಮಿ ರವರಿಗೆ ಹೊಟ್ಟೆಗೆ, ಎದೆಗೆ, ಮತ್ತು ಕೈ ಕಾಲುಗಳಿಗೆ ಒಳಪೆಟ್ಟು ಬಿದ್ದಿದ್ದು, ಆಟೋ ಚಾಲಕ ತಿರುಮಲೇಶನಿಗೆ ಸಹ ಬಲಕಾಲು, ಮುಖಕ್ಕೆ, ಕೈ ಕಾಲುಗಳಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತದೆ. ಯಾವುದೋ ಒಂದು ವಾಹನದಲ್ಲಿ ನಾಯಕನಹಟ್ಟಿ, ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ನೋಡಲಾಗಿ ತಿಪ್ಪೇಸ್ವಾಮಿ ಯು ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ. ಈ ಬಗ್ಗೆ ನಾಯಕನಹಟ್ಟಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


