Friday, November 22, 2024
Flats for sale
Homeರಾಜ್ಯಚನ್ನಪಟ್ಟಣ : ಜ್ಯೂಸ್ ಎಂದು ಕ್ರಿಮಿನಾಶಕ ಕುಡಿದು ಮಗು ಸಾವು.

ಚನ್ನಪಟ್ಟಣ : ಜ್ಯೂಸ್ ಎಂದು ಕ್ರಿಮಿನಾಶಕ ಕುಡಿದು ಮಗು ಸಾವು.

ಚನ್ನಪಟ್ಟಣ : ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಕೃಷ್ಣಾಪುರ ಗ್ರಾಮದ ಪುಷ್ಪ ಹನುಮಂತ ಎಂಬ ದಂಪತಿಗಳ ಏಕೈಕ ಪುತ್ರನಾದ ಯಶ್ವಿಕ್ ಎಂಬ ಎರಡು ವರ್ಷದ ಮಗು ಮನೆಯಲ್ಲಿ ಜಮೀನಿಗೆ ಸಿಂಪಡಿಸಲು ಕೀಟನಾಶಕ (ದ್ರಾವಕ)ವನ್ನು ತಂದು ಇಟ್ಟಿದ್ದ ವೇಳೆ ಜ್ಯೂಸ್ ಎಂದು ಕುಡಿದು ಪುಟ್ಟ ಕಂದಮ್ಮ ಮೃತ ಪಟ್ಟಿರುವ ಘಟನೆ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

ಕೀಟನಾಶಕವನ್ನು ತಂದು ಜಮೀನಿಗೆ ಸಿಂಪಡಿಸಿ ಉಳಿದ ಕೀಟನಾಶಕವನ್ನು ಬಾಟಲಿಯಲ್ಲಿ ಹಾಕಿ ಇಟ್ಟಿದ್ದ ವೇಳೆ ಬಾಟಲಿಯಲ್ಲಿ ಇರುವುದು ಜ್ಯೂಸ್ ಎಂದು ಭಾವಿಸಿ ಪುಟಾಣಿ ಮಗು ಕ್ರಿಮಿನಾಶಕ ಕುಡಿದು ನಂತರ ಸ್ವಲ್ಪ ಸಮಯದಲ್ಲೇ ಹೊಟ್ಟೆ ನೋವು ಎಂದು ಅಳಲು ಪ್ರಾರಂಭಿಸಿದ್ದು ಮನೆಯವರು ಚನ್ನಾಗಿದ್ದ ಮಗು ಅಳಲು ಕಾರಣವೇನೆಂದು ಗಮನಿಸಲಾಗಿ ಮಗು ಕ್ರಿಮಿನಾಶಕ ಕುಡಿದಿರುವ ಬಗ್ಗೆ ಪೋಷಕರಿಗೆ ತಿಳಿದು ನಂತರ ಮಗುವನ್ನು ಚಿಕಿತ್ಸೆಗಾಗಿ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯದಲ್ಲಿ ಮಗು ಸಾವನ್ನಪ್ಪಿದೆ ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular