ಗೋಕಾಕ : ಶಾಸಕ ಬಾಲಚಂದ್ರ ಜಾರಕಿಹೋಳಿ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ( 48) ರವರು ಇಂದು ಮುಂಜಾನೆ ತಿವೃ ಹೃದಯಾಘಾತದಿಂದ ಸಾವನಪ್ಪಿದ ಘಟನೆ ವರದಿಯಾಗಿದೆ.
ಬೆಳಿಗ್ಗೆ ನಾಗಪ್ಪ ಶೇಖರಗೋಳ ಇವರಿಗೆ ಹೃದಯಾಘಾತ ಸಂಭವಿಸಿತ್ತು ಇದರಿಂದ ಗೋಕಾಕದಿಂದ ಬೆಳಗಾವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೋಡೊಂಯ್ಯಲು ವೈದ್ಯರು ತಿಳಿಸಿದ್ದಾರೆ.ಆಂಬುಲೆನ್ಸ್ ಮೂಲಕ ಹೊರಟಿರುವಾಗ ಮಾರ್ಗ ಮದ್ಯದಲ್ಲಿ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿದು ಆಸ್ಪತ್ರೆಗೆ ಶಾಸಕ ಬಾಲಚಂದ್ರ ಜಾರಕಿಹೋಳಿ ದೌಡಾಯಿಸಿದ್ದು ,ಸಾವಿನ ಸುದ್ದಿ ಹರಡುತಿದ್ದಂತೆ ಕಾರ್ಯಕರ್ತರು ಸಾರ್ವಜನಿಕರು ಆಸ್ಪತ್ರೆಯ ಮುಂದೆ ಜಮಾವನೆಗೊಂಡಿದ್ದಾರೆ .


