ಗೋಕಾಕ : ನಾಳೆ ನಾವು ಕೂಡ ರಾಷ್ಟ್ರಪತಿಗಳಾಗ್ತಿವಿ,ಪ್ರಧಾನಿ ಮಂತ್ರಿಗಳಾಗ್ತಿವಿ,ಮುಖ್ಯಮಂತ್ರಿಗಳಾಗ್ತಿವಿ.ಈಗ ಆಗದಿದ್ದರೆ ಮುಂದೊಂದು ದಿನ ಆಗೆ ಆಗ್ತೀವಿ ಮತ್ತು ನಮಗೂ ಕೂಡ ನಿಮ್ಮ ಜೊತೆ ಕುಳಿತುಕೊಳ್ಳುವ ಆಸೆ ಇದೆ ಎಂದು ಗೋಕಾಕದ ಶ್ರೀ ಶೂನ್ಯ ಸಂಪಾದನಮಠದ ಆವರಣದಲ್ಲಿ ನಡೆದ 19 ನೆಯ ಶರಣ ಸಂಸ್ಕ್ರತಿಯ ಉತ್ಸವಕ್ಕೆ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೊರಾಟಗಾರ್ತಿ ಡಾ: ಅಕ್ಕೈ ಪದ್ಮಾಶಾಲಿ ಇವರು ಮಹಿಳಾ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಮನುಷ್ಯರನ್ನು ಮನುಷ್ಯರಾಗಿ ನೋಡಬೇಕು.ಮೌಡ್ಯಗಳಿಂದ ದೂರವಿದ್ದು.ಸರ್ವ ಜಾತಿ ಸರ್ವ ಧರ್ಮಗಳು ಒಟ್ಟಿಗೆ ಸೇರಿಸುವುದೆ ಬಸವತತ್ವ. ಪ್ರಪಂಚದ್ಯಾದಂತ ಪಿತ್ರ ಪ್ರಧಾನ ವ್ಯವಸ್ಥೆ ಇರುವ ಸಮಾಜದಲ್ಲಿ ಮತ್ತು ಜೀವನದುದ್ದಕ್ಕೂ ಸಂಘರ್ಷ ಮಾಡುತ್ತಿರುವ ನಮ್ಮಂತವರಿಗೆ, ಅನೇಕ ದುರ್ಬಲರಿಗೆ, ಹಿಂದುಳಿದವರಿಗೆ
ದಲಿತರಿಗೆ,ದಮನಿತರಿಗೆ, ಶೋಷಿತರಿಗೆ ದ್ವನಿ ಇಲ್ಲದ ಅನೇಕ ಸಮುಧಾಯಗಳಿಗೆ ಧ್ವನಿಯಾಗಿ ಹನ್ನೆರಡನೆಯ ಶತಮಾನದ ಬಸವ ಮಂಟಪ ಇಲ್ಲಿ ಸಾಕ್ಷಿಯಾಗಿದೆ ಎಂದು ಅಭಿಮತ ವ್ಯಕ್ತ ಪಡಿಸಿದರು.
ವೇದಿಕೆ ಮೇಲೆ ವಿವಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಿದರು..ಈ ಸಂದರ್ಭದಲ್ಲಿ ಅನಿತಾ ನಿಂಬರಗಿ,ಆರ್,ಸಿ,ಯು ಸಿಂಡಿಕೆಟ್ ಸದಸ್ಯರಾದ ಡಾ: ನಿರ್ಮಲ್ ಭಟ್ಟಲ್, ಸ್ತ್ರೀ ಪ್ರಸೂತಿ ತಜ್ಞರಾದ ಶ್ರೀಮತಿ ಮಂಗಲಾ ಸನದಿ,ರಾಜೇಶ್ವರಿ ಈರನಟ್ಟಿ, ಸೇರಿದಂತೆ ಇನ್ನೂಳಿದ ಮಹಿಳೆಯರು ಈ ಉತ್ಸವದಲ್ಲಿ ಬಾಗಿಯಾಗಿದ್ದರು.


