Saturday, March 7, 2026
Flats for sale
Homeರಾಜ್ಯಗೋಕಾಕ : ಪ್ರಧಾನಿ ನರೇಂದ್ರ ಮೋದಿ ಮತ್ತು ಕಮಲದ ಗುರುತನ್ನು ಬಿಜೆಪಿ ಅಭ್ಯರ್ಥಿಯೆಂದು ತಿಳಿದು ಗೆಲ್ಲಿಸಿ...

ಗೋಕಾಕ : ಪ್ರಧಾನಿ ನರೇಂದ್ರ ಮೋದಿ ಮತ್ತು ಕಮಲದ ಗುರುತನ್ನು ಬಿಜೆಪಿ ಅಭ್ಯರ್ಥಿಯೆಂದು ತಿಳಿದು ಗೆಲ್ಲಿಸಿ : ಜಗದೀಶ್ ಶೆಟ್ಟರ್.

ಗೋಕಾಕ : ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಇವರ ತಮ್ಮ ಪುತ್ರನ ಪ್ರಚಾರ ಚುರುಕುಗೊಳಿಸಿದ ಬೆನ್ನಲ್ಲೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ,ಮಾಜಿ ಶಾಸಕ ಅನಿಲ ಬೆನಕೆ ಜಂಟಿಯಾಗಿ ಗೋಕಾಕ ಮತಕ್ಷೇತ್ರದಲ್ಲಿ ಟೆಂಪಲ್‌ ರನ್‌ ನಡೆಸಿದರು.

ವಿವಿಧ ದೇವಸ್ಥಾನ, ಮಠಗಳಿಗೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದುಕೊಂಡರು. ಇದೇ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಗದೀಶ ಶೆಟ್ಟರ ಇವರು ಕಾಂಗ್ರೇಸ್ ದುರ್ಬಲವಾಗಿದೆ ಮತ್ತು ನಶಿಸಿಹೊಗುತ್ತಲಿದೆ ಹೋದ ಚುನಾವಣೆಯಲ್ಲಿ ವಿರೋದ ಪಕ್ಷದಲ್ಲಿರುವಷ್ಟು ಸ್ಥಾನ ಗೆಲ್ಲಿಸಲಿಕ್ಕೆ ಆಗಿಲ್ಲ, ಅದರಂತೆ ಜಗದೀಶ ಶೆಟ್ಟರ್ ಕೇವಲ ನಿಮಿತ್ಯ ಅಬ್ಯರ್ಥಿ ನಿಮ್ಮೆಲ್ಲರ ಅಬ್ಯರ್ಥಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಮಲದ ಗುರುತು ಎಂದು ತಿಳಿದು ಈ ಬಾರಿ ಮತ್ತೆ ಬಿಜೆಪಿ ಗೆಲ್ಲಿಸಲು ಮನವಿ ಮಾಡಿದರು.

ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಚುರುಕಾಗಿರುವ ಬಿಜೆಪಿ ಅಬ್ಯರ್ಥಿ ಜಗದೇಶ ಶೆಟ್ಟರ್ ಇವರು ಅವರು ಮೊದಲಿಗೆ ಅಂಕಲಗಿ ಶ್ರೀ ಅಡವಿಸಿದ್ದೇಶ್ವರ, ಮಠ, ಖನಗಾಂವ ಕನ್ನಮ್ಮಾ ದೇವಸ್ಥಾನ, ಮಮದಾಪುರ ಬೀರೇಶ್ವರ ದೇವಸ್ಥಾನ ಮಲ್ಲಾಪುರ ಪಿಜಿಯ ಗುಬ್ಬಲಗುಡ್ಡದ ಕೆಂಪಯ್ಯಮಠ, ಸಾವಳಗಿಯ ಶ್ರೀ ಶಿವಲಿಂಗೇಶ್ವರ ದೇವಸ್ಥಾನ,ಕೊಣ್ಣೂರಿನ ಜೈನ ಮಂದಿರ ಮತ್ತು ಮರಡಿಮಠದ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಬೇಟಿ ಶ್ರೀಗಳಿಂದ ಆಶಿರ್ವಾದ ಪಡೆದು ಸಾರ್ವಜನಿಕರಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲಿಸಲು ಮನವಿ ಮಾಡಿಕೊಂಡರು.

ಈ ವೇಳೆ ಜಿಲ್ಲಾದಕ್ಷ ಸುಭಾಷ ಪಾಟೀಲ,ಭಿಮಗೌಡ್ರ ಪೋಲಿಸ್ ಪಾಟೀಲ, ಸುರೇಶ ಸನದಿ,ನಗರ ಬಿಜೆಪಿ ಮಂಡಲದ ಅದ್ಯಕ್ಷ ಭೀಮಶಿ ಭರಮನ್ನವರ,ಗ್ರಾಮೀಣ ಅದ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಸೇರಿದಂತೆ ಹಲವರು ಸಾಥ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular