Thursday, March 12, 2026
Flats for sale
Homeರಾಜಕೀಯಗೋಕಾಕ : ನಮಗೆ ಇನ್ನೊಂದು ಬೀಮಾ ಕೊರೆಗಾಂವ ಮಾಡಲಿಕ್ಕೆ ಬೀಡಬೇಡಿ.

ಗೋಕಾಕ : ನಮಗೆ ಇನ್ನೊಂದು ಬೀಮಾ ಕೊರೆಗಾಂವ ಮಾಡಲಿಕ್ಕೆ ಬೀಡಬೇಡಿ.

ಗೋಕಾಕ : ಬುದ್ದ ಬಸವ ಅಂಬೇಡ್ಕರ ತತ್ವ ಸಿದ್ದಾಂತಗಳ ವಿಚಾರಕರಿಗೆ ಮತ್ತು ಸಚಿವ ಸತೀಶ ಜಾರಕಿಹೋಳಿಯವರಿಗೆ ಜೀವ ಬೇದರಿಕೆ ಹಾಕಿದ ಕಿಡಗೇಡಿಗಳನ್ನು ಬಂದಿಸಲು ಗೋಕಾಕದಲ್ಲಿ ದಲಿತ ಸಂಘರ್ಷ ಸಮಿತಿಯ ಸದಸ್ಯರಿಂದ ಗೋಕಾಕದ ಬಸವೇಶ್ವರ ವೃತ್ತದಿಂದ ತಮಟೆ ಬಾರಿಸುತ್ತ ಪ್ರತಿಬಟನಾ ಮೆರವಣಿಗೆ ನಡೆಸಿ ಪಾದಯಾತ್ರೆ ಮಾಡುವ ಮೂಲಕ ತಹಶಿಲ್ದಾರ ಕಚೇರಿಗೆ ತೆರಳಿ ಪ್ರತಿಭಟನೆ ಮಾಡಿದರು.

ಪ್ರಗತಿಪರ ವಿಚಾರವಾದಿಗಳನ್ನೆ ಟಾರ್ಗೇಟ್ ಮಾಡಿ ಅಂತವರಿಗೆ ಜೀವ ಬೇದರಿನೆ ಹಾಕುತ್ತಿರುವ ಕೊಮುವಾದಿಗಳು ಮತ್ತು ಮನು ವಾದಿಗಳನ್ನು ಸರಕಾರ ಪತ್ತೆ ಹಚ್ಚಿ ಕಾನೂನೂ ಪ್ರಕಾರ ಮತ್ತೊಮ್ಮೆ ಇನ್ನೊಬ್ಬರಿಗೆ ಜೀವ ಬೇದರಿಕೆ ನೀಡುವಂತಾಗ ಬಾರದೆಂದು ಶಿಕ್ಷಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹಿಳಾ ಅದ್ಯಕ್ಷೆ ಮಂಜುಳಾ ರಾಮಗಾನಟ್ಟಿ ಇವರು ಮಾತನಾಡಿ ನಮಗೆ ಜೀವ ಬೇದರಿಕೆ ಅಷ್ಟೆ ಅಲ್ಲ ರುಂಡವನ್ನು ತೆಗೆಯಲಿಕ್ಕೆ ಕೂಡ ಬರುತ್ತದೆ ನಾವೆನೂ ಬಳೆ ತೊಟ್ಟು ಕುಳಿತಿಲ್ಲ ನಮಗೆ ಇನ್ನೊಮ್ಮೆ ಬೀಮಾ ಕೊರೆಗಾಂವ ಮಾಡಲಿಕ್ಕೆ ಬೀಡಬೇಡಿ ನಾವು ಸಂವಿಧಾನದ ಮೇಲೆ ನಂಬಿಕೆ ಇಟ್ಟವರು,ಸಂವಿಧಾನಕ್ಕೆ ವಿರೋದವಾಗುವ ಕೆಲಸ ನಾವು ಮಾಡೊದಿಲ್ಲ ನೀವು ಕೂಡ ಇನ್ಮುಂದೆ ಸುದಾರಿಸಿಕೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘಟನೆ ಅದ್ಯಕ್ಷ ರಮೇಶ ಮಾದರ,ಲಕ್ಷ್ಮಣ ತೆಳಗಡೆ,ಅರ್ಜುನ ಗಂಡವ್ವಗೋಳ ಸೇರಿದಂತೆ,ಕ್ರಿಶ್ಚಿಯನ್, ಮುಸ್ಲಿಂ ಮತ್ತು ರೈತ ಸಂಘಟನೆಯ ಸದಸ್ಯರು ಬಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular