ಗೋಕಾಕ : ಜಗಳವಾಡಿದ ಕಾರಣ ಕೇಳಲಿಕ್ಕೆ ಹೋದ ಯುವಕನಿಗೆ ಚೂರಿ ಇರಿದು ಹತ್ಯೆ ಮಾಡಿದ ಘಟನೆ ಗೋಕಾಕ ನಗರದಲ್ಲಿ ರಾತ್ರಿ ನಡೆದಿದೆ.
ಸಂಜೆ ಹೊತ್ತಿನಲ್ಲಿ ಎರಡು ಕೊಮಿನ ಯುವಕರ ನಡುವೆ ಹಳೆ ವೈಷ್ಯಮ್ಯ ಕಾರಣದಿಂದ ಜಗಳವಾಡಿದ್ದರು, ಇದೆ ಜಗಳದ ಕಾರಣ ಕೇಳಲು ಮೃತ ಶ್ಯಾನೂರ ನಾಗಪ್ಪ ಪೂಜೇರಿ ಮತ್ತು ಕೆಲವರು ಸೇರಿಕೊಂಡು ಹೋದಾಗ ಇನ್ನೊಂದು ಕೊಮಿನ ಕೆಲ ಯುವಕರು ಕೇಳಲಿಕ್ಕೆ ಬಂದ ಶ್ಯಾನೂರ ನಾಗಪ್ಪ ಪೂಜೇರಿ 26 ವರ್ಷ, ಇತನ ಮೇಲೆ ಕೆಲ ಯುವಕರು ಚಾಕುವಿನಿಂದ ಎದೆಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು,ರಕ್ತದ ಮಡಿಲಿನಲ್ಲಿ ಬಿದ್ದಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸುವ ಮದ್ಯದಲ್ಲಿ ಯುವಕ ಸಾವನ್ನಪ್ಪಿದ್ದಾನೆ,
ಹತ್ಯೆಗಿಡಾದ ಶ್ಯಾನೂರ ನಾಗಪ್ಪಾ ಪೂಜೇರಿ 26 ವರ್ಷದ ಯುವಕ ಪೆಟ್ರೋಲ ಪಂಪಿನಲ್ಲಿ ಕೆಲಸ ಮಾಡುತಿದ್ದನೆಂದು ತಿಳಿದು ಬಂದಿದೆ.ಸುದ್ದಿ ತಿಳಿದ ಸಂಬಂದಿಕರ ಅಕ್ರಂದನ ಮುಗಿಲು ಮುಟ್ಟಿದೆ, ರೊಚ್ಚಿಗೆದ್ದ ಯುವಕರು ಕೊಲೆ ಮಾಡಿದವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ,ಈ ಘಟನೆಯಿಂದ ನಗರದಲ್ಲಿ ಭಯದ ವಾತಾವರಣ ಉಂಟಾಗಿದ್ದು ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ನಗರ ಪೋಲಿಸರು ಬಂದೊ ಬಸ್ತ್ ಮಾಡಿದ್ದಾರೆ. ಇನ್ನು ಹತ್ಯೆ ಮಾಡಿದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ


