ಗುವಾಹಟಿ : ಕಾಂಗ್ರೆಸ್ ಪಕ್ಷವು ದೇಶದ ಸೇನೆಯನ್ನು ಬೆಂಬಲಿಸುವ ಬದಲು, ಪಾಕಿಸ್ತಾನ ಪೋಷಿತ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆರೋಪಿಸಿದ್ದಾರೆ.
ಅಸ್ಸಾಂನ ದರಾಂಗ್ ಜಿಲ್ಲೆಯ ಮಂಗಲ್ಡೋಯ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, `ಆಪರೇಷನ್ ಸಿಂದೂರ್’ ಸಮಯದಲ್ಲಿ, ಪಾಕಿಸ್ತಾನದಲ್ಲಿನ ಭಯೋತ್ಪಾದಕ ತಾಣಗಳನ್ನು ನಾಶಪಡಿಸಿದ ನಮ್ಮ ಸಶಸ್ತç ಪಡೆಗಳನ್ನು ಬೆಂಬಲಿಸುವ ಬದಲು, ಒಳನುಸುಳುವವರು ಮತ್ತು ರಾಷ್ಟç ವಿರೋಧಿ ಶಕ್ತಿಗಳನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ತೊಡಗಿಸಿಕೊAಡಿತ್ತು ಎಂದರು.
ಅತಿ ಹಳೇ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ರಾಷ್ಟçವಿರೋಧಿ ಶಕ್ತಿಗಳನ್ನು ರಕ್ಷಿಸುತ್ತಿದೆ. ಆ ಮೂಲಕ ಜನಸಂಖ್ಯೆಯ ಲೆಕ್ಕಾಚಾರವನ್ನೇ ಬದಲಿಸಲು ಪಿತೂರಿ ನಡೆಸುತ್ತಿದೆ. ಆದರೆ ನುಸುಳುಕೋರರು ನಮ್ಮ ಭೂಮಿಯನ್ನು ಕಬಳಿಸಲು ಮತ್ತು ಇಲ್ಲಿ ವಾಸಿಸಲು ಬಿಜೆಪಿ ಬಿಡುವು ದಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ದಶಕಗಳ ಕಾಲ ಅಸ್ಸಾಂ ರಾಜ್ಯವನ್ನು ಆಳಿತು, ಆದರೆ ಬ್ರಹ್ಮಪುತ್ರ ನದಿಗೆ “ಕೇವಲ ಮೂರೇ ಮೂರು ಸೇತುವೆಗಳನ್ನು ನಿರ್ಮಿಸಿತು.
ಆದರೆ ಬಿಜೆಪಿ ನೇತೃತ್ವದ ಸರ್ಕಾರ ಕಳೆದ 10 ವರ್ಷಗಳಲ್ಲಿ ಅಂತಹ ಆರು ಸೇತುವೆಗಳನ್ನು ನಿರ್ಮಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಮಂಗಲ್ಡೋಯ್ನಲ್ಲಿ 6,3೦೦ ಕೋಟಿ ರೂ. ಮೌಲ್ಯದ ಆರೋಗ್ಯ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಅಡಿಪಾಯ ಹಾಕಿದರು.
ಇದೇ ವೇಳೆ, 1,2೦೦ ಕೋಟಿ ಅಂದಾಜು ವೆಚ್ಚದ 2.9 ಕಿ.ಮೀ ಉದ್ದದ ನರೇಂಗಿಕುರುವಾ ಸೇತುವೆ ಮತ್ತು ಅಸ್ಸಾಂನ ಕಾಮರೂಪ ಮತ್ತು ದರಾಂಗ್ ಜಿಲ್ಲೆಗಳು ಮತ್ತು ಮೇಘಾಲಯದ ರಿ ಭೋಯ್ ಅನ್ನು ಸಂಪರ್ಕಿಸುವ 118.5 ಕಿ.ಮೀ ಉದ್ದದ ಗುವಾಹಟಿ ರಿಂಗ್ ರಸ್ತೆ ಯೋಜನೆಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.


