ಗಾಂಧಿನಗರ : ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದ 195 ಜನರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ ನೀಡಲಾಗಿದೆ. ಅವರಲ್ಲಿ 122 ವಲಸಿಗರು ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಹರ್ಷ ಸಿಂಘ್ವಿ, ಪಾಕಿಸ್ತಾನದಿಂದ ವಲಸೆ ಬಂದಿದ್ದ ಹಿಂದೂ, ಸಿಖ್, ಜೈನ, ಬುದ್ಧ ಸಮುದಾಯಕ್ಕೆ ಸೇರಿದ 195 ಜನರಿಗೆ ಭಾರತದ ಪೌರತ್ವ ಪ್ರಮಾಣಪತ್ರ ವಿತರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಿರಾಶ್ರಿತರಾಗಿದ್ದ 195 ಮಂದಿ ಈಗ ಪ್ರಜೆಗಳಾಗಿದ್ದಾರೆ. ಅಲ್ಲದೇ 1947 ರಿಂದ 1956ರ ಮಧ್ಯೆ ವಲಸೆ ಬಂದವರು ಸಿಎಎ ಕಾನೂನಿನ ಅಡಿಯಲ್ಲಿ ತಮ್ಮ ಬಹುನಿರೀಕ್ಷಿತ ಪೌರತ್ವ ಕನಸು ನನಸಾಗಿಸಿಕೊಂಡಿದ್ದಾರೆ ಎಂದು ಹೇಳಿದರು.


