ಗದಗ : ಸಾಲಬಾಧೆಯಿಂದ ರೈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬೆಣ್ಣೆಪೇಟೆಯಲ್ಲಿ ನಡೆದಿದೆ.
ಶಂಕ್ರಣ್ಣ ಗೋಡಿ (54) ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ ರೈತ.
ಐದು ಎಕರೆ ಜಮೀನಿನಲ್ಲಿ ರೈತ ಶಂಕ್ರಣ್ಣ ಗೋಡಿ ವಿವಿಧ ಬೆಳೆ ಬೆಳೆದಿದ್ದು ಹಲವು ಬ್ಯಾಂಕ್ ಗಳಲ್ಲಿ ಸುಮಾರು 10 ಲಕ್ಷ ರೂ ಸಾಲ ಮಾಡಿದ್ದ ಎಂದು ತಿಳಿದುಬಂದಿದೆ. ರೈತ ಬೆಳೆದಿದ್ದ ಹೆಸರು ಹತ್ತಿ ಶೇಂಗಾ ಮೆಣಸಿನಕಾಯಿ ಬೆಳೆ ಅತೀವೃಷ್ಠಿಯಿಂದ ಹಾನಿಗೊಳಗಾಗಿ ನಾಶವಾಗಿದ್ದು ಟ್ರಾಕ್ಟರ್ ಗಾಗಿ, ಬೆಳೆ ಸಾಲ, ಮತ್ತು ಮತ್ತು ಆಸ್ಪತ್ರೆ ವೆಚ್ಚಕ್ಕಾಗಿ ಸಾಲ ಮಾಡಿದ್ದ ಎಂದು ತಿಳಿದಿದೆ. ವರ್ಷದಿಂದ ವರ್ಷಕ್ಕೆ ಸಾಲ ಹೆಚ್ಚಾಗ್ತಿರೋದಕ್ಕೆ ಬೇಸತ್ತಿದ್ದ ರೈತ ಈ ವರ್ಷವೂ ಆಗಿರುವ ಬೆಳೆಹಾನಿಗೆ ಬೇಸತ್ತು ಜಮೀನುನಲ್ಲಿ ನೇಣಿಗೆಶರಣಾಗಿದ್ದಾನೆ.
ಲಕ್ಷ್ಮೇಶ್ವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.