Thursday, March 12, 2026
Flats for sale
Homeರಾಜ್ಯಗದಗ : ಶಾಸಕ ಚಂದ್ರು ಲಮಾಣಿ ಹುಡುಕಿ ಕೊಡುವಂತೆ ಠಾಣೆಗೆ ದೂರು.

ಗದಗ : ಶಾಸಕ ಚಂದ್ರು ಲಮಾಣಿ ಹುಡುಕಿ ಕೊಡುವಂತೆ ಠಾಣೆಗೆ ದೂರು.

ಗದಗ : ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಹುಡುಕಿಕೊಡುವಂತೆ ಪಕ್ಷಾತೀತ ರೈತಪರ ಹೋರಾಟ ವೇದಿಕೆಯ ಮಹೇಶ ಹೊಗೆಸೊಪ್ಪಿನ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವ ಪ್ರಸಂಗ ನಡೆದಿದೆ.

ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆಯಾಗಿದೆ. ಅಧ್ಯಯನಕ್ಕಾಗಿ ಕೇಂದ್ರ ವೀಕ್ಷಣಾ ತಂಡ ಲಕ್ಷ್ಮೇಶ್ವರ ಕ್ಕೆ ಶುಕ್ರವಾರ ಭೇಟಿ ನೀಡಿದೆ. ನಮ್ಮ ಕ್ಷೇತ್ರದ ಶಾಸಕರು ಈ ತಂಡದ ಜೊತೆಗೆ ಕ್ಷೇತ್ರವನ್ನು ಸುತ್ತಿ ವಿವರಣೆ ನೀಡಬೇಕಾಗಿತ್ತು. ಆದರೆ ಶಾಸಕರು ಇರಲಿಲ್ಲ

ಶುಕ್ರವಾರ ಕಾಣೆಯಾಗಿದ್ದಾರೆ. ಆದ್ದರಿಂದ ಮಹನೀಯರು ಎಲ್ಲಿರುವರೆಂದು ಪತ್ತೆ ಹಚ್ಚಿ ತಿಳಿಸಬೇಕಾಗಿ ವಿನಂತಿ, ಶಾಸಕರು ಹಾಗೂ ಲೋಕಸಭಾ ಸದಸ್ಯರು ಕಾಣೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular