ಗದಗ : ಮಂಗಳೂರಿನಲ್ಲಿ ಹಲವು ವರ್ಷಗಳ ಕಾಲ ರಾಜ್ಯದ ಪ್ರತಿಷ್ಠಿತ ಕನ್ನಡ ವಾಹಿನಿಯ tv9 ಕ್ಯಾಮರಾಮನ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ಬಳಿಕ ಹುಬ್ಬಳ್ಳಿ ಧಾರವಾಡದ ಹಾಗೂ ಗದಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಟಿವಿ 9 ಕ್ಯಾಮರಾಮನ್ ಮೃತಪಟ್ಟಿದ್ದಾರೆ.

ಎಲ್ಲರೊಡನೆ ಉತ್ತಮ ಒಡನಾಟ ಒಂದಿದ್ದ ಹಿರಿಯ ಕ್ಯಾಮರಾಮನ್ ಮೃತಪಟ್ಟಿರುವುದು ಮಾಧ್ಯಮ ಮಿತ್ರರಿಗೆ ದಿಗಿಲು ಬಡಿದಂತಾಗಿದೆ, ಸಂಜೆಯವರೆಗೂ ತನ್ನ ಕೆಲಸ ಕಾರ್ಯ ನಿರ್ವಹಿಸಿ ಬಳಿಕ ಮೃತಪಟ್ಟಿರುವುದು ಕುಟುಂಬವೂ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ನ್ಯೂಸ್‌ಗೆ ಬೇಕಾಗುವ ದೃಶ್ಯಾವಳಿಗಳನ್ನ ಸೆರೆ ಹಿಡಿಯುವಲ್ಲಿ ರವಿ ಗಿರಣಿ, ಪರಿಣಿತನಾಗಿದ್ದರು. ಹಾಗಾಗಿಯೇ ಒಂದೇ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದರು.ಎರಡು ಮಕ್ಕಳನ್ನ ಹೊಂದಿರುವ ರವಿ ಗಿರಣಿ ಅಕಾಲಿಕವಾಗಿ ಸಾವಿಗೀಡಾಗಿದ್ದು, ಪತ್ರಕರ್ತರ ವಲಯದಲ್ಲಿ ನೋವನ್ನುಂಟು ಮಾಡಿದೆ.
ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. ರವಿ ಗಿರಣಿ ಅವರ ಕುಟುಂಬಕ್ಕೆ ರವಿಯ ಸಾವಿನ ನೋವನ್ನ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.