ಗದಗ : ದೇಶದಾದ್ಯಂತ ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಹಾಗೂ ಗದಗ ಜಿಲ್ಲೆಯಾದ್ಯಂತ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಸುಮಾರು 200 ಯುವತಿಯರಿಗೆ ಪೋಷಕರು ಆಣೆ ಪ್ರಮಾಣ ಮಾಡಿಸಿದ ಘಟನೆ ವರದಿಯಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿಯ ಮುಳಗುಂದ ನಾಕಾದಲ್ಲಿರುವ ಎಸ್‌ಎಸ್.ಕೆ ಸಮಾಜದ ವಿಠ್ಠಲಾರೂಢ ದೇವಸ್ಥಾನದಲ್ಲಿ ಯುವತಿಯರಿಗೆ ಲವ್ ಜಿಹಾದ್ ಬಲೆಗೆ ಬೀಳದಂತೆ ಪಾಲಕರು ಎಚ್ಚರಿಕೆ ನೀಡಿದರು.
ಇಂದಿನ ಸಮಾಜದಲ್ಲಿ ಅನ್ಯ ಕೋಮಿನ ಯುವಕರೊಂದಿಗೆ ವಿವಾಹವಾಗಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ ಎಸ್.ಎಸ್.ಕೆ ಮಹಿಳಾ ಮಂಡಳಿಯ ಪದಾಧಿಕಾರಿಗಳು ವಿವರಿಸಿದರು. ಒಂದು ನಿರ್ದಿಷ್ಟ ಕೋಮಿನ ಯುವಕರು ಸಮಾಜದ ಯುವತಿಯರ ಮನಸ್ಸನ್ನು ಪ್ರೀತಿ, ಪ್ರೇಮದ ಹೆಸರಿನಲ್ಲಿ ಕೆಡಿಸುತ್ತಿದ್ದಾರೆ. ಮುಗ್ಧ ಯುವತಿಯರು ಈ ಯುವಕರ ಹುನ್ನಾರ ತಿಳಿಯದೆ ಪ್ರೀತಿಯ ಬಲೆಗೆ ಬಿದ್ದು ಒದ್ದಾಡುತ್ತಿದ್ದಾರೆ. ಮನೆಯಲ್ಲಿನ ಪಾಲಕರ ವಿರೋಧದ ಮಧ್ಯೆ ವಿವಾಹವಾಗುತ್ತಿದ್ದಾರೆ.
ತಮ್ಮ ತೇತೇ ತೀರಿಸಿದ ನಂತರ ಈ ಯುವಕರು ಕೆಲ ಸಮಯದ ನಂತರ ಯುವತಿಯರಿಗೆ ಕಿರುಕುಳ ನೀಡಲು ಪ್ರಾರಂಭಿಸುತ್ತಾರೆ. ಪಾಲಕರ ವಿರೋಧದ ಮಧ್ಯೆ ವಿವಾಹವಾಗಿದ್ದರಿಂದ ಯುವತಿಯರು ತವರು ಮನೆಗೂ ಬಾರದೇ, ಅತ್ತ ಅನ್ಯ ಕೋಮಿನ ಯುವಕನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಾಳಲು ಆಗದೇ ಪರಿತಪಿಸುತ್ತಿದ್ದಾರೆಂದು ಸಂಘಟಕರು ಸಮಾಜದ ಯುವತಿಯರಿಗೆ ವಿವರಿಸಿದರು.
ಈ ಸಭೆಯಲ್ಲಿ ಪಾಲ್ಗೊಂಡಿದ್ದ ಯುವತಿಯರಿಗೆ `ಯಾವುದೇ ಸಂದರ್ಭದಲ್ಲಿಯೂ ಅನ್ಯ ಕೋಮಿನ ಯುವಕರೊಂದಿಗೆ ಪ್ರೀತಿ, ಪ್ರೇಮದ ಬಲೆಯಲ್ಲಿ ಬೀಳುವದಿಲ್ಲ. ಪಾಲಕರು, ಪೋಷಕರು ನಿಶ್ಚಯಿಸುವ ಯುವಕರೊಂದಿಗೆ ವಿವಾಹವಾಗುವಾದಾಗಿ’ ದೇವರ ಹೆಸರಿನಲ್ಲಿ ಆಣೆ ಆಣೆ ಪ್ರಮಾಣ ಮಾಡಿಸಿದರು.