ಗಂಗಾವತಿ : ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಎದುರು ಇರುವ ನೆಹರೂ ಉದ್ಯಾನವನದಲ್ಲಿ ಅಶ್ವರೂಢ ಬಸವೇಶ್ವರರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಶುಕ್ರವಾರ ರಾತ್ರಿ ಶಾಸಕ ಜಿ. ಜನಾರ್ದರೆಡ್ಡಿ, ಧ್ವಜಾರೋಹಣ ನೆರವೇರಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಶಾಸಕ ಧ್ವಜಾರೋಹಣ ನೆರವೇರಿಸಿದ ಬಳಿಕ, ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಅರಳಹಳ್ಳಿಯ ಗವಿಸಿದ್ದೇಶ್ವರ ತಾತ, ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ನೇತೃತ್ವದಲ್ಲಿ ಪುತ್ಥಳಿ ಅನಾವವರಣ ಕಾರ್ಯಕ್ರಮ ನಡೆಯಿತು.
ಪುತ್ಥಳಿ ಅನಾವರಣದ ಹಿನ್ನೆಲೆ ಕೃಷ್ಣದೇವರಾಯ ವೃತ್ತದಲ್ಲಿ ಸಿಡಿಮದ್ದುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು., ಬಣ್ಣಬಣ್ಣದ ಚಿತ್ತಾಕರ್ಷಕ ಸಿಡಿಮದ್ದುಗಳು ನಭಕ್ಕೆ ಹಾರಿ, ಆಕಾಶದಲ್ಲಿ ಚಿತ್ತಾರ ಮೂಡಿಸಿದ್ದು ಜನರ ಗಮನ ಸೆಳೆಯುವಂತೆ ಇತ್ತು.
ಸಂಸದ ಕರಡಿ ಸಂಗಣ್ಣ, ಮಾಜಿ ಸಂಸದರಾದ ಎಚ್.ಜಿ. ರಾಮುಲು, ಎಸ್. ಶಿವರಾಮಗೌಡ, ಮಾಜಿಸಚಿವ ಮಲ್ಲಿಕಾಜರ್ುನ ನಾಗಪ್ಪ, ಮಾಜಿಶಾಸಕರಾದ ಪರಣ್ಣ ಮುನವಳ್ಳಿ, ಜಿ. ವೀರಪ್ಪ, ಎಚ್.ಆರ್. ಶ್ರೀನಾಥ್, ಬಸವರಾಜ ದಢೇಸ್ಗೂರು, ತಿಪ್ಪೇರುದ್ರಸ್ವಾಮಿ, ಇತರರು ಭಾಗಿಯಾಗಿದ್ದರು.