Wednesday, October 22, 2025
Flats for sale
Homeಕ್ರೀಡೆಗಂಗಾವತಿ : ವಿಶ್ವಕಪ್ ಗೆಲುವಿಗೆ ಗಂಗಾವತಿಯಲ್ಲಿ ವಿಶೇಷ ಪೂಜೆ.

ಗಂಗಾವತಿ : ವಿಶ್ವಕಪ್ ಗೆಲುವಿಗೆ ಗಂಗಾವತಿಯಲ್ಲಿ ವಿಶೇಷ ಪೂಜೆ.

ಗಂಗಾವತಿ : ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ತಂಡ ಈಗಾಗಲೆ ಸೆಮಿ ಫೈನಲ್ ತಲುಪಿದ್ದು, ಫೈನಲ್ ಪಂದ್ಯದಲ್ಲೂ ಭಾರತ ಜಯಶಾಲಿಯಾಗಬೇಕು ಎಂದು ಪ್ರಾಥರ್ಿಸಿ ಇಲ್ಲಿನ ದೇಗುಲದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇಲ್ಲಿನ ಪಂಪಾನಗರದ ಪಂಪಾಪತಿ ದೇವಸ್ಥಾನದಲ್ಲಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಮಾಜಿಶಾಸಕ ಪರಣ್ಣ ಮುನವಳ್ಳಿ ಭಾಗವಹಿಸಿ ಭಾರತ ತಂಡದ ಗೆಲುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಪರಣ್ಣ ಮುನವಳ್ಳಿ, ವಿಶ್ವಕಪ್ ಯಾತ್ರೆಯಲ್ಲಿ ಭಾರತ ತಂಡ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಜೈತ್ರಯಾತ್ರೆ ಪೂರ್ಣ ಮಾಡಿದೆ. ಇದೀಗ ಸೆಮಿಫೈನಲ್ನಲ್ಲಿ ಗೆಲುವು ದಾಖಲಿಸಿ ಫನಲ್ಗೆ ಬರಲಿದೆ ಎಂಬ ವಿಶ್ವಾಸವಿದೆ.

ಭಾರತ ತಂಡ ಇದೀಗ ಅತ್ಯಂತ ಶಕ್ತಿಶಾಲಿಯಾಗಿದ್ದು, ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಎಲ್ಲಾ ಅವಕಾಶಗಳಿವೆ. ಭಾರತ ಕೇವಲ ಕ್ರಿಕೆಟ್ನಲ್ಲಿ ಮಾತ್ರವಲ್ಲ, ಎಲ್ಲಾ ರಂಗದಲ್ಲಿ ಸಾಧನೆ ಮಾಡುತ್ತಿದೆ. ಭಾರತ ತಂಡಕ್ಕೆ ಶುಭವಾಗಲಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular