ಗಂಗಾವತಿ : ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಾನೂನು ಬಾಹಿರ ಅಕ್ರಮ ಚಟುವಟಿಕೆಗಳು ವಿಪರೀತವಾಗಿದ್ದು, ನಿಯಂತ್ರಣ ಮಾಡುವಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಬಿಜೆಪಿಯ ಮಾಜಿಶಾಸಕ ಪರಣ್ಣ ಮುನವಳ್ಳಿ ಆರೋಪಿಸಿದ್ದಾರೆ.
ಈ ಬಗ್ಗೆ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಗಂಗಾವತಿಯ ಶಾಸಕ ಜಿ. ಜನಾರ್ದರೆಡ್ಡಿ, ಇತ್ತೀಚೆಗೆ ಅಧಿಕಾರಿಗಳ ಸಭೆ ಕರೆದು ಅಕ್ರಮಗಳನ್ನು ತಕ್ಷಣದಿಂದ ತಡೆದು ಕಠೀಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆದರೆ ವಿಚಿತ್ರ ಎಂದರೆ ಶಾಸಕ ಅಧಿಕಾರಿಗಳಿಗೆ ಸೂಚನೆ ನೀಡಿದ ಬಳಿಕವೇ ಇಡೀ ಕ್ಷೇತ್ರದಲ್ಲಿ ಇಸ್ಪೀಟ್ ಜೂಜಾಟ ಸೇರಿದಂತೆ ನಾನಾ ಕಾನೂನು ಬಾಹಿರ ಕೃತ್ಯಗಳು ವಿಪರೀತವಾಗಿವೆ. ಅಂದರೆ ಶಾಸಕ ರೆಡ್ಡಿ ಮಾತಿಗೆ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲವೆ…? ಶಾಸಕರಿಗೆ ಕ್ಷೇತ್ರದ ಆಡಳಿತದ ಮೇಲೆ ಹಿಡಿತವಿಲ್ಲದಂತಾಯಿತೆ ಎಂದು ಪ್ರಶ್ನಿಸಿದ್ದಾರೆ.
ಎಂಎಲ್ಎ ಹೇಳಿದ್ದೇನು, ಅಧಿಕಾರಿಗಳು ಮಾಡುತ್ತಿರುವುದೇನು..? ಹಾಗಾದರೆ ಕ್ಷೇತ್ರದಲ್ಲಿ ಅಧಿಕಾರಿಗಳು ಶಾಸಕರ ಮಾತು ಪಾಲಿಸುತ್ತಿಲ್ಲ ಎಂಬುವುದು ಇದರಿಂದ ಬಹಿರಂಗವಾಗುತ್ತಿದೆ. ಶಾಸಕರಿಗೆ ಆಡಳಿತದ ಮೇಲೆ ಹಿಡಿತವಿಲ್ಲದಂತಾಗಿದೆ ಎಂದು ಪರಣ್ಣ ಗುಡುಗಿದರು.
ಜೂಜಾಟ ಜೋರು:
ಈ ಹಿಂದೆ ಜೂಜುಕೋರರು ಕದ್ದುಮುಚ್ಚಿ ಜೂಜಾಟ ಆಡುತ್ತಿದ್ದರು. ಆದರೆ ಈಗ ಇಸ್ಪೀಟ್ ಜೂಜಾಟದ ದಂಧೆ ಜೋರಾಗಿದೆ. ಗ್ರಾಮೀಣ ಭಾಗದಲ್ಲಿ ಮತ್ತು ಬೆಟ್ಟ-ಗುಡ್ಡಗಳಲ್ಲಿ ನಿತ್ಯ ದೊಡ್ಡ ಪ್ರಮಾಣದ ಇಸ್ಪೀಟ್ ಜೂಜಾಟ ನಡೆಯುತ್ತಿದೆ.
ಇತ್ತೀಚೆಗೆ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಜೂಜಾಟದ ದಂಧೆ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಜನಸಾಮಾನ್ಯರು ಊಹಿಸಲು ಸಾಧ್ಯವಿಲ್ಲದಂತೆ ಜೂಜಾಟದ ಸ್ವರೂಪ ಬದಲಾಗಿದ್ದು, ಜೂಜುಕೋರರು ತಂತ್ರಜ್ಞಾನ ಬಳಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಿದ್ದಾರೆ.
ಶಾಸಕ ಯಾವಗ ಇರುತ್ತಾರೆ…?
ಜಿ. ಜನಾರ್ದರೆಡ್ಡಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಶಾಸಕ ಆಯ್ಕೆಯಾದ ಬಳಿಕದಿಂದ ಇಲ್ಲಿವರೆಗೂ ಜನರ ಕೈಗೆ ಸಿಗುತ್ತಿಲ್ಲ. ಒಂದು ದಿನ ಇಲ್ಲಿದ್ದರೆ ಐದು ದಿನ ಬೇರೆ ಕಡೆ ಇರುತ್ತಾರೆ. ಶಾಸಕ ಎಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿ ಜನರಿಗೆ ಎದುರಾಗಿದೆ.
ಶಾಸಕ ಯಾವ ಗಂಗಾವತಿಗೆ ಬರುತ್ತಾರೆ, ಯಾವಗ ಎಲ್ಲಿಗೆ ಹೊಗುತ್ತಾರೆ ಎಂಬುವುದು ಪತ್ರಕರ್ತರೇ ಹೇಳಬೇಕು. ಜನರಿಗೆ ಉಂಟಾಗುತ್ತಿರುವ ಅಸೌಕರ್ಯದ ಬಗ್ಗೆ ಮಾಧ್ಯಮಗಳಲ್ಲಿ ಈ ಬಗ್ಗೆ ಏಕೆ ಬರೆಯುತ್ತಿಲ್ಲ ಮಾಧ್ಯಮದ ಪ್ರತಿನಿಧಿಗಳನ್ನು ಪ್ರಶ್ನಿಸಿದರು.
ಸಕರ್ಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದರೂ ಇನ್ನು ಸರಿಯಾಗಿ ಟೇಕಾಫ್ ಆಗಿಲ್ಲ. ಕೇವಲ ವಗರ್ಾವಣೆ ದಂಧೆಯಲ್ಲಿ ಮುಳಗಿದ್ದು, ಎಲ್ಲ ಶಾಸಕರು, ವಗರ್ಾವಣೆ ದಂಧೆಯಲ್ಲಿ ಮಿಲಾಪ್ ಆಗಿದ್ದಾರೆ ಎಂದು ಪರಣ್ಣ ಆರೋಪಿಸಿದರು.


