Wednesday, October 22, 2025
Flats for sale
Homeರಾಜಕೀಯಗಂಗಾವತಿ : ರಾಜಕೀಯ ಭವಿಷ್ಯ ನುಡಿದ ಮಾಜಿಶಾಸಕ: ಚುನಾವಣೆ ಬಳಿಕ ಕಾಂಗ್ರೆಸ್ ಸಕರ್ಾರ ಪತನ.

ಗಂಗಾವತಿ : ರಾಜಕೀಯ ಭವಿಷ್ಯ ನುಡಿದ ಮಾಜಿಶಾಸಕ: ಚುನಾವಣೆ ಬಳಿಕ ಕಾಂಗ್ರೆಸ್ ಸಕರ್ಾರ ಪತನ.

ಗಂಗಾವತಿ : ರಾಜಕೀಯ ಭವಿಷ್ಯ ನುಡಿದ ಮಾಜಿಶಾಸಕ: ಚುನಾವಣೆ ಬಳಿಕ ಸರಕಾರ ಪತನ.
ಗಂಗಾವತಿ : ಮುಂಬರುವ ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿರುವ ಕಾಂಗ್ರೆಸ್ ಸಕರ್ಾರ ಪತನವಾಗಲಿದ್ದು, ರಾಜ್ಯ ರಾಜಕೀಯ ಸ್ಥಿತ್ಯಂತರ ಶುರುವಾಗಲಿದೆ ಎಂದು ಬಿಜೆಪಿಯ ಮಾಜಿಶಾಸಕ ಪರಣ್ಣ ಮುನವಳ್ಳಿ ಭವಿಷ್ಯ ನುಡಿದಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯ ಮಾತ್ರವಲ್ಲ, ಇಡೀ ರಾಷ್ಟ್ರದಲ್ಲಿ ಸ್ಪಷ್ಟ ಬಹುಮತ ಲಭಿಸಲಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ.

ಸಧ್ಯಕ್ಕೆ ರಾಜ್ಯದಲ್ಲಿ 26 ಜನ ಬಿಜೆಪಿ ಸಂಸದರಿದ್ದಾರೆ. ಆದರೆ ಕಾಂಗ್ರೆಸ್ ಸರಕಾರ ಯೋಗ್ಯವಲ್ಲದ ಮತ್ತು ಜನರನ್ನು ಆಮೀಷದ ಬಲೆಗೆ ಬೀಳಿಸುವ ಉದ್ದೇಶಕ್ಕೆ ಜಾರಿ ತಂದಿರುವ ಪುಕಟ್ಟೆ ಭಾಗ್ಯಗಳಿಂದ ಒಂದೆರಡು ಸ್ಥಾನಗಳು ಬಿಜೆಪಿಗೆ ಕೈ ತಪ್ಪಬಹುದು.ಆದರೆ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ದಾಖಲಿಸಲಿದ್ದು, ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೆ ರಾಜ್ಯದಲ್ಲಿ ಕಾಂಗ್ರೆಸ್ ಸಕರ್ಾರದ ಪತನದ ಹಾದಿ ಆರಂಭವಾಗಲಿದೆ. ಸ್ವತಃ ಕಾಂಗ್ರೆಸ್ಸಿಗರೇ ಸಕರ್ಾರವನ್ನು ಉರುಳಿಸಲಿದ್ದಾರೆ ಎಂದು ಮುನವಳ್ಳಿ ಭವಿಷ್ಯ ನುಡಿದರು.

ಅನುಷ್ಠಾನಕ್ಕೆ ಯೋಗ್ಯವಲ್ಲದ ಯೋಜನೆಗಳನ್ನು ಜಾರಿಗೆ ತಂದಿರುವ ಸಕರ್ಾರ ರಾಜ್ಯದ ಆಥರ್ಿಕ ಪರಿಸ್ಥಿತಿಯನ್ನು ಸಂಪೂರ್ಣ ಹಾಳುಗೆಡವಲು ಮುಂದಾಗಿದೆ. ಯೋಜನೆಗಳ ಅನುಷ್ಠಾನಕ್ಕೆ ಮಾಸಿಕ ಸಾವಿರಾರು ಕೋಟಿ ಮೊತ್ತದ ಹಣ ಬೇಕಿದೆ.

ಈ ಯೋಜನೆಗಳಿಗೆ ಹಣ ವಿನಿಯೋಗಿಸಿದರೆ ಅಭಿವೃದ್ಧಿಗೆ ಹಣಕಾಸಿನ ಸಮಸ್ಯೆ ಎದುರಾಗಲಿದ್ದು, ರಾಜ್ಯದಲ್ಲಿ ಅಭಿವೃದ್ಧಿ, ಮೂಲ ಸೌಲಭ್ಯಗಳ ಕುಂಠಿತವಾಗಲಿವೆ. ಕಾಂಗ್ರೆಸ್ ಸಕರ್ಾರದ ಬಗ್ಗೆ ಸ್ವತಃ ಕಾಂಗ್ರೆಸ್ನ ಕೆಲ ಶಾಸಕರಿಗೆ ಅಸಮಧಾನವಿದೆ.

ಈಗಾಗಲೆ 45ಕ್ಕೂ ಹೆಚ್ಚು ಕ್ರಾಂಗ್ರೆಸ್ ಶಾಸಕರು, ಬಿಜೆಪಿಯ ಕೆಲ ರಾಷ್ಟ್ರಮಟ್ಟದ ನಾಯಕರ ಸಂಪರ್ಕದಲ್ಲಿರುವ ಸುದ್ದಿ ವಾಸ್ತವಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ವೃದ್ಧಿಸಬಹುದು. ಚುನಾವಣೆಯ ಬಳಿಕವಂತೂ ಕಾಂಗ್ರೆಸ್ ಸಕರ್ಾರ ಪತನವಾಗಲಿದೆ ಎಂದು ಮಾಜಿಶಾಸಕ ಮುನವಳ್ಳಿ ವಿಸ್ವಾಸ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular