Saturday, November 23, 2024
Flats for sale
Homeರಾಜ್ಯಗಂಗಾವತಿ : ರಾಜಕಾರಣಕ್ಕಾಗಿ ಡಿಕೆಶಿಯಿಂದ ನೀಚತನದ ಕೃತ್ಯ: ರೆಡ್ಡಿ ವಾಗ್ದಾಳಿ.

ಗಂಗಾವತಿ : ರಾಜಕಾರಣಕ್ಕಾಗಿ ಡಿಕೆಶಿಯಿಂದ ನೀಚತನದ ಕೃತ್ಯ: ರೆಡ್ಡಿ ವಾಗ್ದಾಳಿ.

ಗಂಗಾವತಿ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಮ್ಮ ರಾಜಕಾರಣ ಮತ್ತು ಸ್ವಾರ್ಥಕ್ಕಾಗಿ ಇನ್ನೊಬ್ಬರ ವೈಯಕ್ತಿಕ ಜೀವನದಲ್ಲಿ ಪ್ರವೇಶಿಸುವಂತ ನೀಚತನ ಮಾಡುತ್ತಾರೆ ಎಂದು ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ ಆರೋಪಿಸಿದರು.

ನಗರದಲ್ಲಿ ಮತದಾನ ಮಾಡಿದ ಬಳಿಕ ಈ ಬಗ್ಗೆ ಮಾತನಾಡಿದ ರೆಡ್ಡಿ, ನಿನ್ನೆಯಷ್ಟೆ ಶಿವಕುಮಾರ ಅವರ ಆಡಿಯೋ ಬಿಡುಗಡೆಯಾಗಿದೆ. ಇದರಿಂದ ಏನು ಅರ್ಥವಾಗುತ್ತದೆ ಎಂದರೆ, ರಾಜಕೀಯವಾಗಿ ಶಿವಕುಮಾರ ಅವರಿಗೆ ಎದುರಾಳಿಗಳು ಎಂದು ಗೊತ್ತಾದ ಬಳಿಕ ಆ ವ್ಯಕ್ತಿಗಳ ವೈಯಕ್ತಿಕ ಜೀವನದ ಮೇಲೆ ದಾಳಿ ಮಾಡುವ ಪ್ರವೃತ್ತಿಯಿದೆ. ಇದು ನಾನು ಡಿಕೆಯನ್ನು ಹತ್ತಿರದಿಂದ ನೋಡಿದ್ದ ಸ್ವಭಾವ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ವಾಸ್ತವೋ ಅವಾಸ್ತವೋ ಗೊತ್ತಿಲ್ಲ. ಈ ಬಗ್ಗೆ ಉನ್ನತ ತನಿಖೆಯಾದರೆ ಮಾತ್ರ ಗೊತ್ತಾಗಲಿದೆ ಎಂದರು.

ರಾಜಕೀಯದಲ್ಲಿ ಮಾಡುವ ಒಳ್ಳೇಯ ಕೆಲಸ ಮಾಡಿ ಜನರ ಮನಸು ಗೆಲ್ಲುವ ಕೆಲಸ ಮಾಡಬೇಕು.
ಆದರೆ ವ್ಯಕ್ತಿಗಳ ವೈಯಕ್ತಿಕ ಜೀವನವನ್ನು ಹಾಳು ಮಾಡುವ ಕೆಲಸ ಡಿ.ಕೆ. ಮಾಡುತ್ತಾರೆ. ರಾಜಕೀಯವಾಗಿ ಅತಯಂತ ದೊಡ್ಡ ಕುಟುಂಬವನ್ನು ನಾಶ ಮಾಡುವ ಉದ್ದೇಶ ಉದ್ದೇಶ ಡಿ.ಕೆ. ಕೈ ಹಾಕಿರುವ ಉದ್ದೇಶ ಇದರಿಂದ ಗೊತ್ತಾಗಲಿದೆ. ಲೋಕಸಭಾ ಚುನಾವಣೆಯಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಸ್ಥಾನ ಸಿಗಲಿ, ಸಿಗದೇ ಹೋಗಲಿ. ಆದರೆ ಜೂನ್. 4ರ ಬಳಿಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಕಾರಣಕ್ಕೆ ಪ್ರತಿ ಕ್ಷಣದ ತಂತ್ರಗಳನ್ನು ಡಿ.ಕೆ. ಮಾಡುತ್ತಾರೆ. ಒಂದು ಕಡೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕು, ಮತ್ತೊಂದು ಕಡೆ ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ಗುರಿ ಡಿಕೆ ಶಿವಕುಮಾರ ಇರಿಸಿಕೊಂಡಿದ್ದಾರೆ ಎಂದು ರೆಡ್ಡಿ ಆರೋಪಿಸಿದರು. ಇಂತಹ ವಿಡಿಯೋಗಳ ವಿಕೃತ ಸಂಸ್ಕೃತಿ ಮೂಲಕ ಜನರಲ್ಲಿ ಗೊಂದಲ ನಿಮರ್ಾಣ ಮಾಡುವ ಪ್ರವೃತ್ತಿ ಡಿಕೆ ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ರಾಜಕೀಯದಲ್ಲಿ ಡಿ.ಕೆ.ಯನ್ನು ಜನ ಅಸಹ್ಯಪಟ್ಟುಕೊಳ್ಳುವಂತೆ ನೋಡುತ್ತಿದ್ದಾರೆ.

2 ಲಕ್ಷ ಅಂತರದ ಗೆಲುವು:
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯಥರ್ಿ ಬಸವರಾಜ ಕ್ಯಾವಟರ್ ಒಂದುವರೆಯಿಮದ ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಜನ ಮೋದಿಯನ್ನು ಮತ್ತೆ ಪ್ರಧಾನಿಯನ್ನಾಗ ಮಾಡಲು ಅಧ್ಬುತವಾಗಿ ಸ್ಪಂದಿಸಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ 40ರಿಮದ 45 ಸಾವಿರ ಲೀಡ್ ಆಗಬಹುದು ಎಂಬ ನಿರೀಕ್ಷೆಯಿದೆ. ನಾನು ಬಿಜೆಪಗೆ ಬಂದ ಬಳಿಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ್ದ ಮುಸ್ಲಿಂ ಸಮುದಾಯದ 20ರಿಂದ 25 ಸಾವಿರ ಮತ ಮೈನಸ್ ಆದರೂ ನಮಗೆ 20ರಿಮದ 25 ಸಾವಿರ ಮತಗಳ ಲೀಡ್ ಸಿಗಲಿದೆ. ಕಲ್ಯಾಣ ಕನರ್ಾಟಕದಲ್ಲಿ ಕೊಪ್ಪಳ, ಬಳ್ಳಾರಿ, ರಾಯಚೂರು, ಬೀದರ್ ಸೇರಿದಂತೆ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ. ಮೋದಿ ಮತ್ತು ಬಿಜೆಪಿ ಪರವಾದ ಅಲೆ ನಿಮರ್ಾಣವಾಗಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಗಿಂತ ಮೋದಿ ಗ್ಯಾರಂಟಿ ಜನರಿಗೆ ಬೇಕಿದೆ ಎಂದು ರೆಡ್ಡಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular