ಗಂಗಾವತಿ: ರೆಸಾರ್ಟ್ ಒಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಆಕಸ್ಮಿಕ ಸಂಭವಿಸಿ ಇಡೀ ರೆಸಾರ್ಟ್ಗೆ ವ್ಯಾಪಿಸಿ ಹತ್ತಾರು ಕೋಣೆಗಳು ಸೇರಿದಂತೆ ಇಡೀ ರೆಸಾರ್ಟ್ ಹೊತ್ತಿ ಉರಿದ ಘಟನೆ ತಾಲ್ಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೊತ್ತದ ಹಾನಿ ಸಂಭವಿಸಿದೆ.
ಹನುಮನಹಳ್ಳಿ ಗ್ರಾಮದ ಋಷಿಮುಖ ಪರ್ವತದ ರಸ್ತೆಯಲ್ಲಿರುವ ವಂಡರ್ಲಸ್ಟ್ ಎಂಬ ಈ ಘಟನೆ ಸಂಭವಿಸಿದೆ. ಬೆಂಕಿ ಆಕಸ್ಮಿಕಕ್ಕೆ ಖಚಿತ ಕಾರಣ ಏನೆಂದು ಗೊತ್ತಾಗಿಲ್ಲ. ಆದರೆ ಇಡೀ ರೆಸಾರ್ಟ್ನಲ್ಲಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು ಅನುಮಾನಕ್ಕೆ ಕಾರಣವಾಗಿದೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಆನೆಗೊಂದಿ ಭಾಗದ ಬೆರಳೆಣಿಕೆಯಷ್ಟು ಬಿಟ್ಟರೆ ಬಹುತೇಕ ರೆಸಾಟರ್್ಗಳ ಚಟುವಟಿಕೆ ಸ್ಥಗಿತವಾಗಿದ್ದು, ಬೀಗಹಾಕಿ ಸೀಜ್ ಮಾಡಲಾಗಿದೆ. ಆದಾಗ್ಯೂ ಈ ರೆಸಾಟರ್್ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
ವಂಡರ್ಲಸ್ಟ್ ರೆಸಾಟರ್್ನ ಮಾಲಿಕ ಅನ್ಯಕಾರಣಕ್ಕೆ ಹೈದ್ರಾಬಾದಿಗೆ ತೆರಳಿದ್ದು, ಇದೇ ಸಂದರ್ಭದಲ್ಲಿ ಈ ಘಟನೆ ಸಂಭವಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಘಟನೆಯಲ್ಲಿ ರೆಸಾಟರ್್ನಲ್ಲಿದ್ದ ಹತ್ತು ರೂಂಗಳ ಪೈಕಿ ಎಂಟು ಕೋಣೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಹಂಪೆ-ಆನೆಗೊಂದಿ ಪ್ರವಾಸಕ್ಕೆ ಬರುವ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶಕ್ಕೆ ಸ್ಥಳೀಯ ಬಹುತೇಕ ರೆಸಾಟರ್್ಗಳನ್ನು ಬೊಂಬು, ಬಿದಿರು, ಬಲ್ಲೀಸು, ತಟ್ಟೆ ಸೇರಿದಂತೆ ನೈಸಗರ್ಿಕ ವಸ್ತುಗಳಿಂದಲೇ ವಿನ್ಯಾಸ ಮಾಡಿ ನಿಮರ್ಾಣ ಮಾಡಲಾಗುತ್ತಿದೆ.
ವಂಡರ್ಲಸ್ಟ್ ಕೂಡ ಅದೇ ಮಾದರಿಯಲ್ಲಿ ತಲೆ ಎತ್ತಿದೆ. ಕಿರುಚಿತ್ರ ನಿಮರ್ಾಣ ಮಾಡುವ ತಂಡವೊಂದು ಬೀಡು ಬಿಟ್ಟಿತ್ತು ಎಂದು ಹೇಳಲಾಗಿದ್ದು, ಬೆಂಕಿ ಅನಾಹುತಕ್ಕೆ ಖಚಿತ ಕಾರಣ ಗೊತ್ತಾಗಿಲ್ಲ. ಅಗ್ನಿನಂದಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅಗ್ನಿ ನಂದಿಸಿದ್ದಾರೆ. ಆದರೆ ಬಹುತೇಕ ಕೋಣೆಗಳು ಅಗ್ನಿಗೆ ಆಹುತಿಯಾಗಿವೆ.