Thursday, March 12, 2026
Flats for sale
Homeರಾಜ್ಯಗಂಗಾವತಿ ; ಪಾರ್ಟಿ ಮಾಡಿ ರೈಲ್ವೆ ಹಳಿ ಮೇಲೆ ಮಲಗಿದ್ದ ಯುವಕರ ಮೇಲೆ ಹರಿದ ರೈಲು,...

ಗಂಗಾವತಿ ; ಪಾರ್ಟಿ ಮಾಡಿ ರೈಲ್ವೆ ಹಳಿ ಮೇಲೆ ಮಲಗಿದ್ದ ಯುವಕರ ಮೇಲೆ ಹರಿದ ರೈಲು, ಮೂವರು ಸ್ಥಳದಲ್ಲಿಯೇ ಸಾವು.

ಗಂಗಾವತಿ : ಔತಣಕೂಟ ಮಾಡಿದ ಬಳಿಕ ತಮಾಷೆಗೆಂದು ರೈಲ್ವೆ ಹಳಿಯ ಮೇಲೆ ಮಲಗಿದ್ದ ಮೂವ್ವರಯ ಯುವಕರ ಮೇಲೆ ರೈಲು ಹರಿದ ಪರಿಣಾಮ ಯುವಕರು ಭೀಕರವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ರೈಲ್ವೆ ಸ್ಟೇಷನ್ ಸಮೀಪ ಗುರುವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ನಗರದ ಕಿಲ್ಲಾ ಏರಿಯಾದ ಮೌನೇಶ ಶ್ರೀನಿವಾಸ ಬೈಲ್ ಪತ್ತಾರ (23), ಅಣ್ಣೂರು ಗೌರಮ್ಮಕ್ಯಾಂಪಿನ ಸುನಿಲ್ ತಿಮ್ಮಣ್ಣ (23) ಹಾಗೂ ಹಿರೇಜಂತಕಲ್ ನ ವೆಂಕಟ ಭೀಮರಾಯ ಮಂಗಳೂರು (20) ಎಂದು ಗಯರುತಿಸಲಾಗಿದೆ.

ಯುವಕರು ರೈಲ್ವೆ ಹಳಿಯ ಪಕ್ಕದಲ್ಲಿ ಔತಣಕೂಟ ಮಾಡಿದ್ದಾರೆ. ಬಳಿಕ ತಮಾಷೆಗೆಂದು ಹಳಿಯ ಮೇಲೆ ಮಲಗಿದ್ದಾರೆ ಇದೇ ಸಂದರ್ಭದಲ್ಲಿ ಗಂಗಾವತಿ ಮಾರ್ಗವಾಗಿ ಹೊರಟಿದ್ದ ಹುಬ್ಬಳ್ಳಿ-ಸಿಂಧನೂರು ಪ್ಯಾಸಂಜರ್ ರೈಲು ಬಂದಿದೆ. ಆದರೆ ಹಳಿಯ ಮೇಲೆ ಮಲಗಿದ್ದ ಯುವಕರು ಸಕಾಲಕ್ಕೆ ಆಚೆ ಬಾರಲು ಆಗದ ಕಾರಣ ರೈಲು ಯುವಕರ ಮೇಲೆ ಹರಿದಿದೆ. ಪರಿಣಾಮ ಯುವಕರು ಭೀಕರವಾಗಿ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಗದಗ ವಿಭಾಗದ ರೈಲ್ವೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular