ಗಂಗಾವತಿ : ಕೃಷಿ, ಕುಡಿಯುವ ನೀರು ಸೇರಿದಂತೆ ನಾನಾ ಕಾರಣಕ್ಕೆ ಕೊರೆಯಿಸುವ ಕೊಳವೆ ಬಾವಿಗಳು ವಿಫಲವಾದರೆ ಅವುಗಳನ್ನು ವೈಜ್ಞಾನಿಕವಾಗಿ ಮುಚ್ಚದೇ ಹಾಗೆ ಬಿಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಲ್ಲೊಂದು ಇಲ್ಲೊಂದು ಮಕ್ಕಳು ಬಿದ್ದು ಸಾವನ್ನಪ್ಪುತ್ತಿರುವ ಘಟನೆ ರಾಜ್ಯದಲ್ಲಿ ಆಗಾಗಾ ವರದಿಯಾಗುತ್ತಲೆ ಇರುತ್ತವೆ. ಇದೀಗ ಕೊಪ್ಪಳ ಜಿಲ್ಲೆಯಲ್ಲಿರುವ ಇಂತಹ ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚುವ ರೈತರಿಗೆ ನಗದು ಬಹುಮಾನ ನೀಡುವ ಮೂಲಕ ರೈತರೊಬ್ಬರು, ಮಕ್ಕಳ ಪ್ರಾಣ ರಕ್ಷಣೆಗೆ ವಿಭಿನ್ನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಗಂಗಾವತಿ ನಗರದ ರೈತ ಉಪ್ಪಾರ ಸಮುದಾಯದ ಹಿರಿಯ ಮುಖಂಡ ಮತ್ತು ರೈತ ಗ್ಯಾರೇಜ್ ಮಾರಣ್ಣ ಅಲಿಯಾಸ್ ಶಿವಣ್ಣ ಎಂಬ ವ್ಯಕ್ತಿ, ಈಗ ನಿರುಪಯುಕ್ತ ತೆರೆದ ಕೊಳವೆ ಬಾವಿಗಳಿಂದ ಉಂಟಾಗುತ್ತಿರುವ ಅಪಾಯದ ಬಗ್ಗೆ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸುತಿದ್ದಾರೆ.
ಕೊಳವೆ ಬಾವಿ ತೋಡಿಸಿದ್ದರ ಬಗ್ಗೆ ದಾಖಲೆ ಮತ್ತು ನಿರುಪಯುಕ್ತವಾದ ಬಳಿಕ ಮುಚ್ಚಿದ ಬಗ್ಗೆ ಸೂಕ್ತ ಚಿತ್ರ, ವಿಡಿಯೋ ಸಮೇತ ಮಾಹಿತಿ ನೀಡಿದರೆ ಅಂತಹ ರೈತರಿಗೆ ನೇರವಾಗಿ ಐನ್ನೂರು ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ. ಈ ಮೂಲಕ ಈ ರೈತ ಜನರ ಗಮನ ಸೆಳೆದಿದ್ದಾರೆ.
2018ರಿಂದ ಜಾಗೃತಿ:
ತೆರೆದ ನಿರುಪಯುಕ್ತ ಕೊಳವೆ ಬಾವಿಗಳ ಬಗ್ಗೆ 2018ರಿಂದ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿರುವ ರೈತ ಶಿವಣ್ಣ, ಅವುಗಳಿಂದ ಸಂಭವಿಸುತ್ತಿರುವ ಅನಾಹುತಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸ್ವಂತ ಖಚರ್ಿನಿಂದ ಅಭಿಯಾನ, ಜಾಥಾ ಮಾಡಿಸುತಿದ್ದಾರೆ.
ಕರಪತ್ರ ಪತ್ರ ಹಂಚುವುದು, ಜಾನಪದ ಕಲಾವಿದ ಶರಣಪ್ಪ ವಡಗೇರಿ ತಂಡದವರಿಂದ ಜಿಲ್ಲೆಯ ಕೊಪ್ಪಳ ಬಸ್ನಿಲ್ದಾಣ, ಕೂಕನಪಳ್ಳಿ ಸಂತೆ, ಕುಷ್ಟಗಿ, ಯಲಬುಗರ್ಾ, ಕನಕಗಿರಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಬೀದಿ ನಾಟಕಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಮಕ್ಕಳ ಪ್ರಾಣ ಅಮೂಲ್ಯ:
ಚಿಕ್ಕ ಮಕ್ಕಳ ಪ್ರಾಣವನ್ನು ಉಳಿಸುವ ಮತ್ತು ಮಾನವೀಯತೆಯ ಉದ್ದೇಶಕ್ಕೆ ನಾನು ಈ ಕಾರ್ಯ ಮಾಡುತ್ತಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಗ್ರಾಮದ ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳಬಾರದು, ಇಂತಹ ದುರಂತಗಳು ಸಂಭೌಇಸಿಬಾರದು ಎಂಬ ಕಾರಣಕ್ಕೆ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ.
ಕೊಪ್ಪಳ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿರುವ ನಿರುಪಯುಕ್ತ ತೆರೆದ ಕೊಳವೆ ಬಾವಿಗಳನ್ನು ಪತ್ತೆಹಚ್ಚಿ ಮುಚ್ಚಿಹಾಕಲು ಶಿಸ್ತುಬದ್ಧ ಕ್ರಮಗಳನ್ನು ಕೈಗೊಂಡು, ಲಚ್ಯಾಣ ಗ್ರಾಮದಲ್ಲಿ ಸಂಭವಿಸಿದ ದುರ್ಘಟನೆ ಕೊಪ್ಪಳ ಜಿಲ್ಲೆಯಲ್ಲಿ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಶಿವಣ್ಣ ಜಿಲ್ಲಾಡಳಿತಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.


