Friday, March 13, 2026
Flats for sale
Homeರಾಜ್ಯಗಂಗಾವತಿ : ನವವರಾತ್ರಿ: ದೇಗುಲದಲ್ಲಿ ಗಿಡನೆಟ್ಟು ದೇವಿ ಆರಾಧನೆ.

ಗಂಗಾವತಿ : ನವವರಾತ್ರಿ: ದೇಗುಲದಲ್ಲಿ ಗಿಡನೆಟ್ಟು ದೇವಿ ಆರಾಧನೆ.

ಗಂಗಾವತಿ : ನವರಾತ್ರಿ- ದಸರಾ ಎಂದರೆ ಹಿಂದುಗಳ ಪಾಲಿಗೆ ದೊಡ್ಡ ಪವಿತ್ರ ಹಬ್ಬ. ಇದೀಗ ನವರಾತ್ರಿ ಆರಂಭವಾಗಿದ್ದು ನವರಾತ್ರಿಯ ಮೊದಲ ದಿನ ತಾಲ್ಲೂಕಿನ ಢಣಾಪುರದಲ್ಲಿ ಗ್ರಾಮಸ್ಥರು ದೇವಸ್ಥಾನದ ಆವರಣದಲ್ಲಿ ಗಿಡ ನೆಡುವ ಮೂಲಕ ಮಾದರಿ ಹಬ್ಬ ಆಚರಣೆಗೆ ಮುಂದಾಗಿದ್ದು, ಜನರ ಗಮನ ಸೆಳೆಯುವಂತಾಗಿದೆ.

ತಾಲ್ಲೂಕಿನ ಢಣಾಪುರದ ಮಹಿಳೆಯರು ಭಾನುವಾರ ಗ್ರಾಮದ ದುಗರ್ಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರೋತ್ಸವದ ಅಂಗವಾಗಿ ಒಂಬತ್ತು ದಿನಗಳ ಧಾಮರ್ಿಕ ಕಾರ್ಯಕ್ರಮಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಇದಕ್ಕೂ ಮೊದಲು ದುಗರ್ಾ ಪರಮೇಶ್ವರಿ ಅಮ್ಮನವರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡಲಾಯಿತು. ಬಳಿಕ ದೇಗುಲದ ಆವರಣದಲ್ಲಿ ಧಾಮರ್ಿಕ ಕಾರ್ಯಕ್ರಮಕ್ಕೆ ಉಪಯೋಗವಾಗುವ ಅರಳಿ, ಬನ್ನಿ ಬಿಲ್ವಪತ್ರೆ, ಶೀವವಾರದಂತ ಸಸಿಗಳನ್ನು ನೆಡಲಾಯಿತು.

ಗ್ರಾಮದ ಹಿರಿಯ ಮಹಿಳೆ ಲಲಿತಮ್ಮ ನೇತೃತ್ವದಲ್ಲಿ ರಾಮಾಂಜನೇಯ, ಶಾಂತಕುಮಾರ, ನಿಂಗಪ್ಪ ನಾಯಕ, ಟಾಕಪ್ಪ ನೇತೃತ್ವದಲ್ಲಿನ ತಂಡ ನವರಾತ್ರಿ ಅಂಗವಾಗಿ ಪೂಜೆಯ ಮರಗಳನ್ನು ನೆಡಲಾಯಿತು ಎಂದು ಗ್ರಾಮದ ಯುವಕ ಹನುಮೇಶ ಢಣಾಪುರ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular