Saturday, March 14, 2026
Flats for sale
Homeಸಿನಿಮಾಗಂಗಾವತಿ : ದರ್ಶನ್ ಬಿಡುಗಡೆಗಾಗಿ ತಿಮ್ಮಪ್ಪನ ಮೊರೆ ಹೋದ ಅಭಿಮಾನಿ.

ಗಂಗಾವತಿ : ದರ್ಶನ್ ಬಿಡುಗಡೆಗಾಗಿ ತಿಮ್ಮಪ್ಪನ ಮೊರೆ ಹೋದ ಅಭಿಮಾನಿ.

ಗಂಗಾವತಿ : ಅಭಿಮಾನಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆ ಕಾರಾಗೃಹದ ಪಾಲಾದ ಚಿತ್ರನಟ ದರ್ಶನ್ ಸುರಕ್ಷಿತ ಬಿಡುಗಡೆಯ ಹರಕೆ ಹೊತ್ತ ಅಭಿಮಾನಿಯೊಬ್ಬ ತಿರುಪತಿ ತಿಮ್ಮಪ್ಪನ ಸನ್ನಿಧಾನದಲಿ ತಪ್ಪು ಕಾಣಿಕೆ ಸಲ್ಲಿಸಿ ದೇವರ ಮೊರೆ ಹೋಗಿದ್ದಾನೆ. ತನ್ನ ನೆಚ್ಚಿನ ನಟನಿಗೆ ಯಾವುದೇ ತೊಂದರೆಯಾಗಬಾರದು, ಆದಷ್ಟು ಬೇಗ ಜೈಲಿನಿಂದ ಬಿಡುಗಡೆಯಾಗಬೇಕು, ಮತ್ತೆ ಸಿನಿಮಾದಲ್ಲಿ ನಟಿಸುವಂತಾಗಬೇಕು ಎಂದು ಹರಕೆ ಹೊತ್ತ ಕನಕಗಿರಿ ಪಟ್ಟಣದ ನಿವಾಸಿ ಬಸವರಾಜ ದಾಸರ ಎಂಬ ಯುವಕ ಈಗ ತಿಮ್ಮಪ್ಪನ ಮೊರೆ ಹೋಗಿದ್ದಾನೆ.   ಬಸವರಾಜ ದಾಸರ, ಕಳೆದ ಹಲವು ವರ್ಷದಿಂದ ದರ್ಶನ್ ಅಭಿಮಾನಿಯಾಗಿದ್ದಾರೆ. ದರ್ಶನ ಸಿನಿಮಾ ರಿಲೀಸ್ ಆದಾಗಲೊಮ್ಮ ಕನಕಗಿರಿ ಪಟ್ಟಣದಲ್ಲಿ ಸಂಭ್ರಮಾಚರಣೆ ಮಾಡಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸುತ್ತಿದ್ದರು. ಆದರೆ ದಾಸ ಜೈಲು ಪಾದ ಬಳಿಕ ಈ ಅಭಿಮಾನಿ ಆತಂಕಗೊಂಡಿದ್ದಾರೆ.

ಹೀಗಾಗಿ ತಿರುಪತಿಗೆ ತೆರಳಿರುವ ದಾಸನ ಅಭಿಮಾನಿ, ಹತ್ತು ರೂಪಾಯಿ ನೋಟಿನ ಮೇಲೆ ದೇವರಿಗೆ ಲಿಖಿತ ಮನವಿ ಸಲ್ಲಿಸಿ ಆದಷ್ಟು ಬೇಗ, ತನ್ನ ನೆಚ್ಚಿನ ನಟ ಬಿಡುಗಡೆಯಾಗಬೇಕು ಎಂದು ನೋಟನ್ನು ತಿಮ್ಮಪ್ಪನ ಕಾಣಿಕೆಯ ಹುಂಡಿಗೆ ಹಾಕಿದ್ದಾನೆ.  

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ ಆರೋಪಿಯಷ್ಟೆ. ಅಪರಾಧಿಯಲ್ಲ. ಒಂದು ವೇಳೆ ಅಪರಾಧಿಯಾಗಿದ್ದರೆ ಶಿಕ್ಷೆಗೊಳಪಡಿಸಲಿ ಎಂದಿರುವ ಅಭಿಮಾನಿ, ನಟ ದರ್ಶನ ಆರೋಗ್ಯ ವಿಚಾರಣೆಗೆ ಅಭಿಮಾನಿಗಳಿಗೆ ಜೈಲಿನಲ್ಲಿ ಭೇಟಿಗೆ ನ್ಯಾಯಾಲಯ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

Most Popular