Friday, March 13, 2026
Flats for sale
Homeರಾಜ್ಯಗಂಗಾವತಿ : ಜನತಾ ದರ್ಶನ ಎಂಬುವುದು ಸುಷ್ಮಾಸ್ವರಾಜ್ ಅವರ ಕೊಡುಗೆ: ರೆಡ್ಡಿ

ಗಂಗಾವತಿ : ಜನತಾ ದರ್ಶನ ಎಂಬುವುದು ಸುಷ್ಮಾಸ್ವರಾಜ್ ಅವರ ಕೊಡುಗೆ: ರೆಡ್ಡಿ

ಗಂಗಾವತಿ : ಜನರ ಸಮಸ್ಯೆಗಳನ್ನು ಆಲಿಸಿ ಸಾಧ್ಯವಾದರೆ ಸ್ಥಳೀಯವಾಗಿಯೇ ಪರಿಹಾರ ಕಲ್ಪಿಸುವ ಜನತಾ ದರ್ಶನ ಎಂಬ ಕಲ್ಪನೆ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರಿಂದ ಆರಂಭವಾಗಿದೆ. ಅದು ಅವರ ಕೊಡುಗೆ ಎಂದು ಗಂಗಾವತಿ ಶಾಸಕ ಜಿ. ಜನಾರ್ದರೆಡ್ಡಿ ಹೇಳಿದರು.

ಇಲ್ಲಿನ ನಗರಸಭೆಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಈ ಹಿಂದೆ ಪ್ರವಾಸೋದ್ಯಮ ಸಚಿವನಾಗಿದ್ದ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರ ಸಲಹೆ ಮೆರೆಗೆ ತಿಂಗಳಿಗೆ ಎರಡು ಜನತಾ ದರ್ಶನ ಮಾಡುತ್ತಿದ್ದೆ.

ಜನ ಬಳಿಗೆ ತೆರಳಿ ಜನರ ಸಮಸ್ಯೆ ಆಲಿಸುವ ಉದ್ದೇಶಕ್ಕಾಗಿ ಕಾರ್ಯಕ್ರಮ ನಿಗಧಿ ಮಾಡಲಾಗಿತ್ತು. ತಿಂಗಳಿಗೆ ಎರಡು ಬಾರಿ ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಆರು ಏಳು ಗಂಟೆವರೆಗೂ ಜನರ ಮಧ್ಯೆ ಇದ್ದು ಸಮಸ್ಯೆ ಆಲಿಸಿ ಪರಿಹಾರಕ್ಕೆ ಯತ್ನಿಸುತ್ತಿದ್ದೆ.ಮುಂದೆ ಅದು ಸಕರ್ಾರದ ಮಟ್ಟದಲ್ಲಿ ಗಮನ ಸೆಳೆದು ಅಂದಿನ ಸಿಎಂ ಯಡಿಯೂರಪ್ಪ ಸಕರ್ಾರ ಅಧಿಕೃತ ಕಾರ್ಯಕ್ರಮವನ್ನಾಗಿ ಜನತಾ ದರ್ಶನ ಮಾಡಿದರು. ಬಳಿಕ ಸಕರ್ಾರಗಳು ಬದಲಾದಂತೆ ಹೆಸರು ಬದಲಾಯಿತೇ ವಿನಃ ಮೂಲ ಸ್ವರೂಪದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಶಾಸಕ ರೆಡ್ಡಿ ಸ್ಮರಿಸಿದರು.ಚುನಾವಣೆಯ ಪೂರ್ವದಲ್ಲಿ ನಾನು ಹೇಳಿದಂತೆ ನಿಮ್ಮೊಂದಿಗೆ ನಾವು ಎಂಬ ಕಾರ್ಯಕ್ರಮವನ್ನು ಮುಂದಿನ ತಿಂಗಳಿಂದ ಆರಂಭಿಸುತ್ತಿದ್ದೇನೆ. ಪ್ರತಿ ಹೋಬಳಿಯ ಜನರೊಂದೊಂದಿಗೆ ಕಾಲ ಕಳೆದ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಯತ್ನಿಸುತ್ತೇನೆ. ನನ್ನೊಂದಿಗೆ ಹೋಬಳಿ ಹಂತಕ್ಕೆ ನಾನಾ ಇಲಾಖೆಯ ಅಧಿಕಾರಿಗಳು ಬದಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶಾಸಕ ಜನಾರ್ದರೆಡ್ಡಿ, ಜನತಾ ದರ್ಶನದಂತ ಕಾರ್ಯಕ್ರಮಗಳು ಜನರ ಸಮಸ್ಯೆ ಪರಿಹಾರ ಕಲ್ಪಿಸಿಕೊಡುತ್ತವೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular