ಗಂಗಾವತಿ : ಆನೆಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತದ ಹಿನ್ನೆಲೆ ಎಚ್ಚೆತ್ತ ಸಕರ್ಾರ, ಅನಧಿಕೃತ ಪಟಾಕಿ ಅಂಗಡಿಗಳ ಮೇಲೆ ದಾಳಿ ಮಾಡುವಂತೆ ಸೂಚನೆ ನೀಡಿದ್ದ ಹಿನ್ನೆಲೆ ಇಲ್ಲಿನ ನಾನಾ ಇಲಾಖೆಯ ಅಧಿಕಾರಿಗಳು ಗುರುವಾರ ಸಾಮೂಹಿಕವಾಗಿ ದಾಳಿ ಮಾಡಿ 20 ಲಕ್ಷಕ್ಕೂ ಅಧಿಕ ಮೌಲ್ಯದ ಪಟಾಕಿಗಳನ್ನು ಜಪ್ತಿ ಮಾಡಿದ್ದಾರೆ.
ಪೊಲಿಸ್, ಕಂದಾಯ, ನಗರಸಭೆ, ಜೆಸ್ಕಾಂ, ತಾಲ್ಲೂಕು ಪಂಚಾಯಿತಿ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಸಾಮೂಹಿಕವಾಗಿ ನಗರದ ನಾನಾ ಪಟಾಕಿ ಅಂಗಡಿ ಮತ್ತು ಗೋದಾಮುಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದರು.
ಇಲ್ಲಿನ ಜಾಮೀಯಾ ಮಸೀದಿ ಮುಂದೆ, ಪಕ್ಕದಲ್ಲಿ ಅಂಗಡಿಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಅಪಾರ ಪ್ರಮಾಣದ ಸಿಡಿ-ಮದ್ದುಗಳನ್ನು ವಶಕ್ಕೆ ಪಡೆದರು. ಬಳಿಕ ಬಳಿಗಾರ ಒಣಿ ರಸ್ತೆ ಮತ್ತು ವೆಂಕಟರಮಣ ದೇವಸ್ಥಾನಕ್ಕೆ ಹೋಗು ಮಾರ್ಗ ಮಧ್ಯ ಇರುವ ಗೋದಾಮುಗಳ ಮೇಲೂ ದಾಳಿ ಮಾಡಿದರು.
ಬೆಚ್ಚಿ ಬಿದ್ದ ಅಧಿಕಾರಿಗಳು:
ಗೋದಾಮುಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಅಧಿಕಾರಿಗಳು ಪಟಾಕಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿರುವುದು ಕಂಡು ಬೆಚ್ಚಿಬಿದ್ದರು. ಜನ ವಸತಿ ಪ್ರದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಂಗ್ರಹಿಸಿಡುವುದು ಕಾನೂನು ಬಾಹಿರವಾಗಿದ್ದು, ಲೈಸನ್ಸ್ ರದ್ದು ಪಡಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಎರಡು ಅಂಗಡಿ, ಎರಡು ಗೋದಾಮು ಸೇರಿದಂತೆ ಒಟ್ಟು ನಾಲ್ಕೈದು ಕಡೆ ದಾಳಿ ಮಾಡಿದ ಅಧಿಕಾರಿಗಳು ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ಬೃಹತ್ ಪ್ರಮಾಣದ ಪಟಾಕಿ ವಶಕ್ಕೆ ಪಡೆದುಕೊಂಡಿದ್ದಾರೆ. ನಗರಸಭೆಯ ತಾಜ್ಯ ವಿಲೇವಾರಿ ಮಾಡುವ ವಾಹನಗಳಲ್ಲಿ ಪಟಾಕಿ ಸಾಗಿಸಲಾಯಿತು.
ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಪೌರಾಯುಕ್ತ ವಿರೂಪಾಕ್ಷಮೂತರ್ಿ, ನಗರಠಾಣೆಯ ಪ್ರಭಾರಿ ಪಿಐ ಮಂಜುನಾಥ, ತಾಲ್ಲುಕು ಪಂಚಾಯಿತಿ ಇಒ ಲಕ್ಷ್ಮಿದೇವಿ, ನಗರಸಭೆಯ ಚೇತನಕುಮಾರ, ನಾಗರಾಜ್, ಜೆಸ್ಕಾಂ ಇಲಾಖೆಯ ಎಇಇ ವೀರೇಶ, ಶ್ರೀಧರಗೌಡ ಸೇರಿದಂತೆ ಇತರರಿದ್ದರು.


