ಗಂಗಾವತಿ : ಇಲ್ಲಿನ ಯುವ ಬರಹಗಾತರ್ಿ, ಉಪನ್ಯಾಸಕಿ ಫಹರ್ಾನಾಜ್ ಮಸ್ಕಿ ಅವರ ಅಪ್ಪ’ ಎಂಬ ಕವಿತೆಯು ಬಳ್ಳಾರಿ ವಿಶ್ವವಿದ್ಯಾಲಯದ ನಾಲ್ಕನೇ ಸೆಮಿಸ್ಟರ್ ಪದವಿ ಪಠ್ಯವಾಗಿರುವ ಕಲಾವಿಜಯ-4 ಪುಸ್ತಕ್ಕೆ ಆಯ್ಕೆಯಾಗಿದೆ. ಬಳ್ಳಾರಿಯ ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಬಿ.ಎ., ಬಿ.ಎಸ್.ಡಬ್ಲ್ಯೂ ತರಗತಿಗಳ ಕನ್ನಡ ಭಾಷಾ ಪಠ್ಯಕ್ಕೆ ಆಯ್ಕೆಯಾಗಿ ಪುಸ್ತಕದಲ್ಲಿ ಫಹರ್ಾನಾಜ್ ಮಸ್ಕಿ ಅವರಅಪ್ಪ’ ಎಂಬ ಕವಿತೆಯು ಮುದ್ರಣಗೊಂಡಿದೆ.
ಈ ಕವಿತೆಯು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆಯ್ಕೆ ಆದ ಫಹರ್ಾನಾಜ್ರ ಚೊಚ್ಚಲ ಕೃತಿಯಾದ ಮೌನ ಮನದ ಮಾತುಗಳು’ ಎಂಬ ಕವನ ಸಂಕಲನದಿಂದ ಆಯ್ಕೆ ಮಾಡಲಾಗಿದೆ. ಎಂದು ವಿವಿಯ ಪ್ರಕಟಣೆ ತಿಳಿಸಿದೆ. ಅಪ್ಪ’ ಕವಿತೆಯು ಲಿಂಗ ತಾರತಮ್ಯವಿಲ್ಲದ ಕೌಟುಂಬಿಕ ಸಂಬಂಧದಲ್ಲಿ ಅಪ್ಪ, ಅಮ್ಮನಾಗಿ, ಗುರು, ಗೆಳೆಯನಾಗಿ ಹಲವು ಪಾತ್ರ ನಿರ್ವಹಿಸುವ ಮೂಲಕ ಮಗಳನ್ನು ಮಗನಾಗಿ ಬೆಳೆಸುತ್ತಾರೆ ಎಂಬುದನ್ನು ಹಾಗೂ ಗಂಡಿನ ಗಡಸುತನವಿಲ್ಲದೇ ಜವಾಬ್ದಾರಿಯುತ ಅಪ್ಪ ನಿರ್ವಹಿಸುವ ಕರ್ತವ್ಯದ ಮೇಲೆ ಈ ಕವಿತೆ ಬೆಳಕು ಚೆಲ್ಲುತ್ತದೆ.
ಪ್ರವೃತ್ತಿಯಿಂದ ಯುವ ಲೇಖಕಿ, ವೃತ್ತಿಯಿಂದ ಉಪನ್ಯಾಸಕಿಯಾಗಿರುವ ಫಹರ್ಾನಾಜ್ ಮೂಲತಃ ಮಸ್ಕಿಯವರಾಗಿದ್ದು, ಗುಲ್ಬಗರ್ಾದಲ್ಲಿ ಜನಿಸಿ, ಆರಂಭಿಕ ಶಿಕ್ಷಣ ಮಸ್ಕಿ, ಶಹಾಪುರದ ಶಾಲೆಗಳಲ್ಲಿ ಪಡೆದಿದ್ದಾರೆ.
ನಂತರ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಗಂಗಾವತಿಯ ವೈಹಿವಾಹಿಕ ಹಿನ್ನೆಲೆ ಹೊಂದಿರುವ ಫಹರ್ಾನಾಜ್, ಪ್ರಸ್ತುತ ನೆಲಮಂಗಲದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.


