Sunday, March 15, 2026
Flats for sale
Homeರಾಜ್ಯಗಂಗಾವತಿ : ಕೊರೊನಾ ಆತಂಕ: ಅಂಜನಾದ್ರಿಯಲ್ಲಿ ಮಾಸ್ಕ್ ಕಡ್ಡಾಯ.

ಗಂಗಾವತಿ : ಕೊರೊನಾ ಆತಂಕ: ಅಂಜನಾದ್ರಿಯಲ್ಲಿ ಮಾಸ್ಕ್ ಕಡ್ಡಾಯ.

ಗಂಗಾವತಿ : ರಾಜ್ಯದಲ್ಲಿ ನಿಧಾನವಾಗಿ ಕೊರೊನಾದ ಜೆಎನ್-1 ತಳಿಯ ಸೋಂಕು ಹರಡುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತರಿಗೆ ಮಾಸ್ಕ್ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆದೇಶ ಮಾಡಿದೆ.

ಹನುಮಜಯಂತಿ ಅಂಗವಾಗಿ ಅಂಜನಾದ್ರಿಯಲ್ಲಿ ಡಿ.23 ಮತ್ತು 24ರಂದು ನಡೆಯುವ ಹನುಮಮಾಲೆ ವಿಸರ್ಜನೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆ ಕೊರೊನಾ ಅಘಾತದ ಆತಂಕ ಉಂಟಾಗಿದೆ.

ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತವು, ಅಂಜನಾದ್ರಿಗೆ ಬರುವ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸಿದೆ. ಅಲ್ಲದೇ ಜ್ವರ, ನೆಗಡಿ, ಶೀತದಂತ ಸಾಮಾನ್ಯ ಲಕ್ಷಣ ಹೊಂದಿರುವ ವ್ಯಕ್ತಿಗಳಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

ಅಂಜನಾದ್ರಿಯ ಹನುಮಮಾಲೆ ಸಿದ್ಧತೆಗೆ ನಿಯೋಜನೆಯಾಗಿರುವ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾನಾ ಇಲಾಖೆಯ ಸುಮಾರು ಎರಡುವರೆ ಸಾವಿರ ಜನರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ಎಲ್ಲರೂ ಮಾಸ್ಕ್ ಧರಿಸಿ ಕರ್ತವ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಪ್ರಸಾದದ ಕೌಂಟರ್ನಲ್ಲಿರುವ ಸಿಬ್ಬಂದಿ, ಅಡುಗೆ ಮನೆಯಲ್ಲಿರುವ, ಊಟದ ಕೌಂಟರ್ನಲ್ಲಿರು, ದೇಗುಲದ ಪ್ರಾಂಗಣದಲ್ಲಿರುವವರು ಸೇರಿದಂತೆ ಎಲ್ಲಾ ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಖುದ್ದು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ನಲೀನ್ ಅತುಲ್ ಕುಮಾರ್, ಜ್ವರ, ಕೆಮ್ಮು, ಶೀತ, ನೆಗಡಿಯಂತ ಲಕ್ಷಣಗಳಿರುವ ವ್ಯಕ್ತಿಗಳಿಗೆ ಮಾಸ್ಕ್ ಕಡ್ಡಾಯ ಎಂದು ಈಗಾಗಲೆ ರಾಜ್ಯ ಸಕರ್ಾರದಿಂದ ನಿದರ್ೇಶನ ಬಂದಿದೆ. ಸಕರ್ಾರದ ಆದೇಶದ ಪ್ರಕಾರ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

ಅಲ್ಲದೇ ಜಿಲ್ಲೆಯಲ್ಲಿ ಕೊರೊನಾದ ಪ್ರಕರಣಗಳು ಕಂಡು ಬಂದಲ್ಲಿ ಸೂಕ್ತ ರೀತಿಯಲಿ ನಿರ್ವಹಣೆ ಮಾಡಲು ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ಆಕ್ಸಿಜನ್, ಬೆಡ್, ವೆಂಟಿಲೇಷನ್ ಸೇರಿದಂತೆ ಎಲ್ಲಾ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಡಿಸಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular