ಗಂಗಾವತಿ : ಮಣ್ಣನ್ನು ಸಂರಕ್ಷಿಸುವುದು ಮತ್ತು ಮಳೆ ನೀರನ್ನು ಭೂಮಿಯೊಳಗೆ ಇಂಗಿಸುವ ಕಾರ್ಯ ಸರಕಾರದ ಇಲಾಖೆ ಮತ್ತು ಅಧಿಕಾರಿಗಳು ಮಾಡಬೇಕಿರುವ ಕೆಲಸವನ್ನು ಯುವ ಸಮೂಹವೊಂದು ಕೈಗೆತ್ತಿಕೊಳ್ಳುವ ಮೂಲಕ ಜನರ ಗಮನ ಸೆಳೆದಿದೆ.
ಪ್ರತಿವಾರ ಗಂಗಾವತಿ ಸಮೀಪದಲ್ಲಿರುವ ಒಂದೊಂದು ಪ್ರದೇಶದತ್ತ ರೈಡಿಂಗ್, ಟ್ರಕ್ಕಿಂಗ್, ಸೈಕ್ಲಿಂಗ್ ಸೇರಿದಂತೆ, ಹೊಸ-ಹೊಸ ಪ್ರದೇಶ್ಳ ಅನ್ವೇಷಣೆಗೆ ತೆರಳುವ ಇಲ್ಲಿನ ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯರು ಈಗ ಅಂಜನಾದ್ರಿ ಸುತ್ತಲಿನ ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಿದ್ದಾರೆ.
ಅಂಜನಾದ್ರಿ ಬೆಟ್ಟದ ಮೇಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದ್ದ ಚಾರಣ ಬಳದ ಯುವ ಸದಸ್ಯರು, ಇದೀಗ ಅಂಜನಾದ್ರಿ ಬೆಟ್ಟದ ಸುತ್ತಲಿನ ಪರಿಸರ ಸಂರಕ್ಷಣೆ ರಕ್ಷಣೆ, ಮಳೆ ನೀರಿನಿಂದ ಮಣ್ಣು ಮತ್ತು ಸಾರ ಕೊಚ್ಚಿಹೋಗದಂತೆ ತಡೆಯುವ ಕೆಲಸಕ್ಕೆ ಕೈಹಾಕಿದ್ದಾರೆ.
ಅಂಜನಾದ್ರಿ ಬೆಟ್ಟದ ಕೆಳಗೆ ಇರುವ ಪ್ರದರ್ಶನ ಪಥ ಮತ್ತು ರೈತರ ಹೊಲಗದ್ದೆಗಳಿಗೆ ನೀರೊದಗಿಸುವ ಉಪ ಕಾಲುವೆ ಸಮೀಪ 350ಕ್ಕೂ ಹೆಚ್ಚುತಾಳೆ ಮರದ ಬೀಜಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಜೊತೆಗೆ ರೈತರ ಹಿತ ಕಾಯಲು ಮುಂದಾಗಿದ್ದಾರೆ.
ಕಾಲುವೆ ದಂಡೆಯ ಸಮೀಪ ಮತ್ತು ರೈತರ ಹೊಗದ್ದೆಗಳಲ್ಲಿ ಮಣ್ಣಿನ ಸಾರ ಕೊಚ್ಚಿಹೋಗದಂತೆ ನಡೆಯಲು ಮತ್ತು ಮಳೆಯ ನೀರು ಭೂಮಿಯೊಳಗೆ ಇಳಿದು ಹೋಗುವಂತತೆ ಮಾಡುವ ಉದ್ದೇಶಕ್ಕೆ ಈ ತಾಳೆಮರದ ಬೀಜಗಳನ್ನು ನಾಟಿ ಮಾಡಲಾಗಿದೆ ಎಂದು ಸದಸ್ಯ ಅಜರ್ುನ್ ಹೇಳಿದ್ದಾರೆ.
ತಾಳೆಮರದ ಬೀಜ ನಾಟಿ ಮಾಡಿದರೆ ಆರೈಕೆ ಅತ್ಯಲ್ಪ, ಬಹುಕಾಲ ಇರಬಲ್ಲ ಮರ. ಅಲ್ಲದೇ ಅದರ ಹಣ್ಣುಗಳು ಮನುಷ್ಯರಿಗಿಂತ ಪಕ್ಷಿ, ಪ್ರಾಣಿಗಳಿಗೆ ಹೆಚ್ಚು ಉಪಯೋಗವಾಗಲಿ ಎಂಬ ಕಾರಣಕ್ಕೆ ತಾಳೆ ಬೀಜ ನಾಟಿ ಮಾಡಲಾಗಿದೆ ಎಂದು ಚಾರಣ ಬಳದ ಸದಸ್ಯ ಸುದರ್ಶನ ವರ್ಮ ಹೇಳಿದ್ದಾರೆ.


