ಗಂಗಾವತಿ : ಪ್ರತಿಭೆ, ಕಲೆ ಎಂಬುವುದಕ್ಕೆ ಸೀಮೆಗಳಿಲ್ಲ. ಅದು ರಾಜ್ಯ, ದೇಶ, ಭಾಷೆಗಳ ಗಡಿಯನ್ನು ದಾಟಿ ಅಭಿಮಾನಿಗಳನ್ನು ಸಂಪಾದಿಸುತ್ತದೆ ಎಂಬ ಮಾತು ಚಂದನವನದ ಪ್ರತಿಭಾವಂತ ನಟಪುನಿತ್ ರಾಜ್ ಕುಮಾರ್ ಅವರ ವಿಚಾರದಲ್ಲಿ ಆಗಾಗ ಸಾಬೀತಾಗುತ್ತಲೆ ಇದೆ.
ತಮಿಳುನಾಡಿನ ಕೊಯಮ್ಮತ್ತೂರು ಜಿಲ್ಲೆಯ ಪೊಲ್ಲಾಚಿ ಪಟ್ಟಣದ ಮುತ್ತು ಸೆಲ್ವನ್ರಾಜ್ ಎಂಬ ಅಪ್ಪು ಅವರ ಅಪ್ಪಟ ಅಭಿಮಾನಿಯೊಬ್ಬ ಅಪ್ಪು ಸ್ಮರಣಾರ್ಥ ಸೈಕಲ್ ಮೂಲಕವೇ ಮೂರು ವರ್ಷ ಅಂದರೆ 1111 ದಿನಗಳ ಏಷ್ಯಾ ಖಂಡದ ನಾನಾ ದೇಶಗಳನ್ನು ಸುತ್ತುವ ಗುರಿ ಇರಿಸಿಕೊಂಡಿದ್ದಾರೆ.
ಪುನಿತ್ ನಿಧನರಾದ ಬಳಿಕ ಅವರ ಸ್ಮರಣಾರ್ಥ ಕಳೆದ 2021 ಡಿಸಂಬರ್ 21ರಂದು ಸೈಕಲ್ ಯಾತ್ರೆ ಆರಂಭಿಸಿರುವ ಮುತ್ತುಸೆಲ್ವನ್ರಾಜ್, ಇದುವರೆಗೆ ದೇಶದ ನಾನಾ ರಾಜ್ಯಗಳನ್ನು ಸುತ್ತಿದ್ದಾರೆ. ಇದೀಗ
19ನೇ ರಾಜ್ಯವಾಗಿ ಕರ್ನಾಟಕ ಪ್ರವೇಶಿಸಿದ್ದಾರೆ. ಕೊಪ್ಪಳ 449 ಜಿಲ್ಲೆ ಎಂದು ಮುತ್ತು ತಿಳಿಸಿದ್ದಾರೆ.
ತಮಿಳುನಾಡಿನಿಂದ ಸೈಕಲ್ ಯಾತ್ರೆ ಆರಂಭಿಸಿರುವ ಮುತ್ತು, ಲಡಾಕ್, ಜಮ್ಮು-ಕಾಶ್ಮೀರ, ಗೋವಾ, ಮಧ್ಯಪ್ರದೇಶ, ಕಾಗರ್ಿಲ್, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಒಟ್ಟು 19 ರಾಜ್ಯಗಳಲ್ಲಿ ಸಂಚರಿಸಿದ್ದಾರೆ.
ಅಲ್ಲದೇ ಏಷ್ಯಾಖಂಡದ ದೇಶಗಳಾದ ನೇಪಾಳ್, ಬಾಂಗ್ಲಾದೇಶ, ವಿಯೇಟ್ನಾಂ ಸೇರಿದಂತೆ ಹಲವು ದೇಶಗಳಲ್ಲಿ ಸಂಚರಿಸಿದ್ದಾರೆ. ಒಂದು ಸಾವಿರದ ಒಂದು ನೂರಾ ಹನ್ನೊಂದು ದಿನಗಳ (ಸುಮಾರು ಮೂರು ವರ್ಷಕಾಲ) ಸೈಕಲ್ನಲ್ಲಿಯೇ ಪ್ರಯಾಣಿಸುವ ಸುಧೀರ್ಘ ಯಾತ್ರೆಯನ್ನು ಮುತ್ತುರಾಜ್ ಹಮ್ಮಿಕೊಂಡಿದ್ದಾರೆ.
ಯಾತ್ರೆಯ ಉದ್ದೇಶ:
ದಕ್ಷಿಣ ಭಾರತದ ನಾನಾ ರಾಜ್ಯಗಳಲ್ಲಿ ಪುನಿತ್ ರಾಜ್ ಅವರ ಬಗ್ಗೆ ಬಹುತೇಕ ರಾಜ್ಯದ ಜನರಿಗೆ ಗೊತ್ತಿರುವ ಕಾರಣ ಯಾತ್ರೆಯ ಸಂದರ್ಭದಲ್ಲಿ ಪ್ರತಿ ತಾಲ್ಲೂಕಿನಲ್ಲಿ ಸಸಿಗಳನ್ನು ನೆಡುವುದು ಬಳಿಕ ಅಲ್ಲಿನ ಅಪ್ಪು ಅಭಿಮಾನಿಗಳನ್ನು ಭೇಟಿಯಾಗಿ ಮಾಹಿತಿ ಹಂಚಿಕೊಳ್ಳುವ ಉದ್ದೇಶ ಮುತ್ತುರಾಜ್ ಹೊಂದಿದ್ದಾರೆ.
ಅಲ್ಲದೇ ಅಭಿಮಾನಿಗಳು ಪ್ರತಿ ವರ್ಷ ಆಚರಿಸುವ ಕಾರ್ಯಕ್ರಮದ ಮಾಹಿತಿಯನ್ನು ಪಡೆದು ಪುಸ್ತಕ ಬರೆಯುವ ಇಂಗಿತ ಮುತ್ತುರಾಜ್ ವ್ಯಕ್ತಪಡಿಸಿದ್ದಾರೆ. ಸಂಚರಿಸುವ ಪ್ರತಿ ತಾಲ್ಲೂಕಿನ ಪೊಲೀಸ್ ಠಾಣೆ, ತಹಸೀಲ್ದಾರ್ಗಳನ್ನು ಭೇಟಿಯಾಗಿ ತಮ್ಮೊಂದಿಗೆ ತಮದಿರುವ ಪುಸ್ತಕದಲ್ಲಿ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ.
ಎಂಟು ಲಕ್ಷ ಮೊತ್ತದ ವೆಚ್ಚ;
ಮೂಲತಃ ಎಂಬಿಎ ಹಣಕಾಸು ನಿರ್ವಹಣೆ ವಿದ್ಯಾಥರ್ಿಯಾಗಿದ್ದ ಮುತ್ತುರಾಜ್, ವೆಲ್ಕಾರ್ ಸಂಸ್ಥೆಯಲ್ಲಿ ಬೈಯೋ ಮೆಡಿಕಲ್ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪುನಿತ್ ಸಾವಿನ ಬಳಿಕ ಉದ್ಯೋಗಕ್ಕೆ ತಿಲಾಂಜಲಿ ಇಟ್ಟು, ಅವರ ಸ್ಮರಣಾರ್ಥ ದೇಶ ಸುತ್ತುವ ಅಭಿಯಾನ ಆರಂಭಿಸಿದ್ದಾರೆ.
ಇದುವರೆಗೂ ಯಾತ್ರೆಯ ಸಂದರ್ಭದಲ್ಲಿ ಊಟ, ತಿಂಡಿ, ಚಹಾ ಸೇವನೆಯಂತ ನಾನಾ ಕಾರಣಕ್ಕೆ ಒಟ್ಟು ಎಂಟು ಲಕ್ಷ ಮೊತ್ತದ ಹಣ ವ್ಯೆಯವಾಗಿದೆ. ಈ ಪೈಕಿ ಆರು ಲಕ್ಷ ಮೊತ್ತವನ್ನು ತಮ್ಮ ಸ್ವಂತ ಹಣ ಬಳಸಿಕೊಂಡಿರುವ ಮುತ್ತು, ಮಿಕ್ಕ ಎರಡು ಲಕ್ಷ ಮೊತ್ತದ ಹಣವನ್ನು ಸ್ನೇಹಿತರು, ಅಭಿಮಾನಿಗಳು ನೀಡಿದ್ದಾರೆ.
ನಟ ಚೇತನ್ ಟೈಯರ್ ಕೊಡುಗೆ:
ಮುತ್ತುಸೆಲ್ವನ್ ಹಮ್ಮಿಕೊಂಡಿರುವ ಸೈಕಲ್ ಯಾತ್ರೆಯಲ್ಲಿ ಇದುವರೆಗೂ ಎರಡು ಸೈಕಲ್ ಬದಲಿಸಿದ್ದು ಮೂರನೇ ಸೈಕಲ್ ಇದೀಗ ಬಳಸುತ್ತಿದ್ದಾರೆ. ಟೈಯರ್ಗಳ ಸವಕಳಿಯಿಂದ ಇದುವರೆಗೂ 110 ಟೈಯರ್ ಬದಲಿಸಲಾಗಿದ್ದು, ನಟ ಚೇತನ್ 111ನೇ ಟೈಯರ್ ಕೊಡಿಸಿದ್ದಾರೆ.
ಯಾತ್ರೆಯು ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ತೋರುತ್ತಿರುವ ಪ್ರೀತಿಗೆ ನಾನು ಚಿರಋಣಿ. 2025ರ ಜನವರಿ 26ರಂದು ದೆಹಲಿಯ ಇಂಡಿಯಾಗೇಟ್ನಲ್ಲಿ ಪ್ರಯಾಣ ಮುಕ್ತಾಯ ಮಾಡುವ ಉದ್ದೇಶ, ಗುರಿ ಇದೆ ಎಂದು ಸೆಲ್ವನ್ ಹೇಳಿದರು.