ಗಂಗಾವತಿ : 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದರೆ ಇಕ್ಬಾಲ್ ಅನ್ಸಾರಿಯನ್ನು ರಾಜಕೀಐವಾಗಿ ಮುಗಿಸಿ ಬಿಡಬಹುದು ಎಂದು ನನ್ನ ರಾಜಕೀಯ ವಿರೋಧಿಗಳು ಹಾಗೂ ನನ್ನದೇ ಪಕ್ಷದ ಕೆಲವರು
ಷಡ್ಯಂತ್ರ ರೂಪಿಸಿದರು. ಅದರಲ್ಲಿ ಸಧ್ಯಕ್ಕೆ ಯಶಸ್ವಿಯಾಗಿದ್ದಾರೆ.ಆದರೆ ರಾಜಕೀಯ ಎಂದರೆ ಕೇವಲ ಅಧಿಕಾರ, ಹಣವಲ್ಲ. ಜನಸೇವೆಯನ್ನೆ ನಾನು ರಾಜಕೀಯ ಎಂದು ಭಾವಿಸಿಕೊಂಡು ಬಂದವನು. ಹೀಗಾಗಿ ಜನರ ಸೇವೆ ಮಾಡುವ ಉದ್ದೇಶಕ್ಕೆ ನನ್ನ ಉಸಿರು ಇರೋ ಕೊನೆ ತನಕ ನಾನು ರಾಜಕೀಯದಲ್ಲಿರುತ್ತೇನೆ ಎಂದು ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ಈ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ ಅನ್ಸಾರಿ, ಸಮಸ್ತ ಮುಸ್ಲಿಂ ಸಮುದಾಯವು ಸಿದ್ದರಾಮಯ್ಯ ಅವರನ್ನು ನಂಬಿಕೊಂಡಿದೆ. ಹೀಗಾಗಿ ಮುಸ್ಲಿಂ ಸಮುದಾಯದ ನಾಯಕ ಎಂದರೆ ಅದು ಸಿದ್ದರಾಮಯ್ಯ ಎಂದು ಅನ್ಸಾರಿ ಘೋಷಣೆ ಮಾಡಿದರು.
2023ರ ವಿಧಾಸನಸಭಾ ಚುನಾವಣೆಯ ಬಳಿಕ ಮೊದಲ ಬಾರಿಗೆ ತಮ್ಮ ನಿವಾಸದಲ್ಲಿ ಆತ್ಮಾವಲೋಕನ, ಕಾರ್ಯಕರ್ತರ ಸಂಘಟನೆ ಹಾಗೂ ಮುಂಬರುವ ಲೋಕಸಭಾ ಚುನಾವಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನನ್ನನ್ನು ರಾಜಕೀಯವಾಗಿ ಮುಗಿಸಬೇಕೆಂದು ವಿರೋಧಿಗಳು ಮತ್ತು ನನ್ನದೇ ಪಕ್ಷದ ಕೆಲವರು ಯತ್ನಿಸಿದರು. ಆದರೆ ಹತ್ತಿಕ್ಕಿದಷ್ಟು ಪುಟಿದೇಳುವ ಸ್ವಾಭಾವ ನನ್ನದು. ಹೀಗಾಗಿ ರಾಜಕೀಯವಾಗಿ ನಾನು ಇನ್ನಷ್ಟು ಬಲೀಷ್ಟವಾಗುತ್ತೇನೆ ವಿನಃ, ಎದುರಾಳಿಗಳಿಗೆ ಅಂಜುವ ತಲೆ ಬಾಗಿಸುವ ಜಾಯಮಾನ ನನ್ನದಲ್ಲ.
ನನ್ನನ್ನು ನಂಬಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಮತದಾರರು ನನಗೆ ಮತ ನೀಡಿದ್ದಾರೆ. ಅದರಲ್ಲೂ ಮುಸ್ಲಿಂ ಸಮುದಾಯವು ದೊಡ್ಡ ಪ್ರಮಾಣದಲ್ಲಿ ನನ್ನ ಜೊತೆ ನಿಂತಿದೆ. ಹೀಗಾಗಿ ಅವರ ಋಣ ತೀರಿಸಲು ಸಕರ್ಾರದಿಂದ ಸೌಲಭ್ಯಗಳನ್ನು ತಂದು ಅವರಿಗೆ ತಲುಪಿಸುತ್ತೇನೆ ಎಂದರು.
ಅನ್ಸಾರಿಯನ್ನು ಸೋಲಿಸಿದರೆ ಅವರ ರಾಜಕೀಯ ಆಟ ಮುಗಿಯುತ್ತದೆ. ಮನೆಯಲ್ಲಿ ಕುಳಿತು ಬಿಡುತ್ತಾರೆ ಎಂದು ವಿರೋಧಿಗಳು ಭಾವಿಸಿದ್ದರು. ಆದರೆ ಈಗ ಹೇಳುತ್ತೇನೆ. ನನ್ನ ಜೀವ ಇರೋ ವರೆಗೂ ರಾಜಕೀಯದಲ್ಲಿರುತ್ತೇನೆ. ನನ್ನ ರಾಜಕೀಯ ಎಂದರೆ ಅದು ಕೇವಲ ಸಾಮಾಜಿಕ ಸೇವೆ ಮಾತ್ರ. ಇದರಿಂದ ವಿಮುಖನಾಗಲು ಸಾಧ್ಯವಿಲ್ಲ ಎಂದರು.
ಸಾಮಾಜ ಸೇವೆ, ಜನಸೇವೆಯ ಹೆಸರಲ್ಲಿ ಜನರ ಕೆಲಸ ಮಾಡಿ ಕೊಡಲು ಕೆಲ ರಾಜಕಾರಣಿಗಳು ಜನರ ಬಳಿ ಹಣ ಲೂಟಿ ಮಾಡುತ್ತಾರೆ. ಆದರೆ ನಾನು ಅಂಥಹ ವ್ಯಕ್ತಿಯಲ್ಲ. ಜನರ ಕೆಲಸವನ್ನು ಪುಕ್ಕಟೆಯಾಗಿ ಮಾಡಿ ಕೊಡುವವನು ಎಂದು ಅನ್ಸಾರಿ ಹೇಳಿದರು.