ಗಂಗಾವತಿ: ಅಪ್ರಾಪ್ತ ಯುವತಿಯೊಬ್ಬರಿಂದ ಇನ್ಸ್ಟಾಗ್ರಾಂ ನಂಬರ್ ಪಡೆದು ಪರಿಚಯ ಮಾಡಿಕೊಂಡು ಆಕೆಯೊಂದಿಗೆ ಸಲುಗೆ ಬೆಳೆಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಇಲ್ಲಿನ ನಗರಠಾಣೆಯಲ್ಲಿ ಯುವಕನೊಬ್ಬನ ಮೇಲೆ ಫೋಕ್ಸೋ ಪ್ರಕರಣ ದಾಖಲಾದ ಘಟನೆ ನಡೆದಿದೆ.
ತಾಲ್ಲೂಕಿನ ವೆಂಕಟಗಿರಿ ಗ್ರಾಮದ ಸಂತ್ರಸ್ತ ಅಪ್ರಾಪ್ತ ಯುವತಿ ನೀಡಿದ ದೂರಿನ ಮೆರೆಗೆ ಇಲ್ಲಿನ ನಗರಠಾಣೆಯಲ್ಲಿ ಮುಸ್ತಾಪ ವಡ್ಡರಹಟ್ಟಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ವಿದ್ಯಾಥರ್ಿ ನಗರದ ಪ್ರತಿಷ್ಠಿತ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾಥರ್ಿಯಾಗಿದ್ದು, ಶಿಕ್ಷಣದ ಭಾಗವಾಗಿ ಇಲ್ಲಿನ ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಾಯೋಗಿಕ ತರಬೇತಿಗೆ ನಿಯೋಜನೆ ಮಾಡಿದ ಸಂದರ್ಭದಲ್ಲಿ
ಸಂತ್ರಸ್ತ ಯುವತಿ ಪರಿಚಯವಾಗಿದ್ದಾಳೆ. ಆಕೆಯಿಂದ ಇನ್ಸ್ಟಾಗ್ರಾಂ ನಂಬರ್ ಪಡೆದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ನಿತ್ಯವೂ ಲೈಂಗಿಕ ಕಿರುಕುಳ:
ಅನಾರೋಗ್ಯ ಪೀಡಿತ ತನ್ನ ತಂದೆಯನ್ನು ನಾಲ್ಕು ತಿಂಗಳ ಹಿಂದೆ ಇಲ್ಲಿನ ಸಕರ್ಾರಿ ಆಸ್ಪತ್ರೆಗೆ ಯುವತಿ ದಾಖಲು ಮಾಡಿದ್ದು, ಚಿಕಿತ್ಸೆ ನೀಡುವ ನೆಪದಲ್ಲಿ ಮುಸ್ತಾಫ ಅಪ್ರಾಪ್ತ ಯುವತಿಯನ್ನು ಪರಿಚಯಿಸಿಕೊಂಡು ಸಲುಗೆ ಬೆಳೆಸಿದ್ದಾನೆ.
ಬಳಿಕ ಆಕೆಯಿಂದ ಇನ್ಸ್ಟಾಗ್ರಾಂ ನಂಬರ್ ಪಡೆದುಕೊಂಡು ಅಲ್ಲಿ ಕಳೆದ ನಾಲ್ಕು ತಿಂಗಳಿಂದ ನಿತ್ಯವೂ ಚಾಟಿಂಗ್ ಮಾಡುತ್ತಾ ನಿನ್ನನ್ನು ಗಾಢವಾಗಿ ಪ್ರೀತಿಸುತಿದ್ದೇನೆ ಎಂದು ನಂಬಿಸಿದ್ದಾನೆ. ಬಳಿಕ ನಿತ್ಯವೂ ಮಾಧ್ಯರಾತ್ರಿ ನಗ್ನವಾಗಿ ವಿಡಿಯೋ ಕರೆ ಮಾಡುವಂತೆ ಒತ್ತಾಯಿಸಿದ್ದಾನೆ.
ನಗ್ನವಾಗಿ ವಿಡಿಯೋ ಕಾಲ್ ಮಾಡದೇ ಹೋದಲ್ಲಿ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಆರೋಪಿ ಬೆದರಿಸಿದ್ದ ಎನ್ನಲಾಗಿದ್ದು, ಮದುವೆಯ ಭರವಸೆ ಹಿನ್ನೆಲೆ ಯುವತಿ ಕಳೆದ ನಾಲ್ಕು ತಿಂಗಳಿಂದ ನಗ್ನವಾಗಿ ವಿಡಿಯೋ ಕಾಲ್ ಮಾಡಿದ್ದಾಳೆ.
ಇತ್ತೀಚೆಗೆ ಆ ಯುವತಿ ನ್ಗನವಾಗಿ ಮಾತನಾಡಲು ನಿರಕಾರಿಸಿದ್ದರಿಂದ ವಿಡಿಯೋಕಾಲ್ಗಳನ್ನು ಸ್ಕ್ರೀನ್ ರೆಕಾಡರ್ಿಂಗ್ ಮಾಡಿಕೊಂಡಿದ್ದ ಯುವಕ, ಸ್ಯಾಂಪಲ್ ರೂಪದಲ್ಲಿ ಆಕೆಗೊಂದು ವಿಡಿಯೋ ತುಣಕು
ಇನ್ಸ್ಟಾಗ್ರಾಂಗೆ ಪೋಸ್ಟ್ ಮಾಡಿ ಕಳಿಸಿ ನೋಡುವಂತೆ ಹೇಳಿದ್ದಾನೆ.
ಆಕೆ ಅದನ್ನು ನೋಡಿದಾಗ ತನ್ನದೇ ನಗ್ನಚಿತ್ರ ಕಂಡು ಯುವತಿ ಬೆಚ್ಚಿಬಿದ್ದಿದ್ದಾಳೆ. ನಗ್ನವಾಗಿ ವಿಡಿಯೋ ಕಾಲ್ ಮಾಡದೇ ಹೋದಲ್ಲಿ ಇವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾನೆ ಎನ್ನಲಾಗಿದ್ದು, ಇದರಿಂದ ನೊಂದ ಯುವತಿ, ಪೊಲೀಸರಿಗೆ ದೂರು ನೀಡಿದ್ದಾರೆ.


