ಗಂಗಾವತಿ : ಚಂದನವನದ ಪ್ರತಿಭಾವಂತ ನಾಯಕನಟ ಪುನಿತ್ ರಾಜಕುಮಾರ ಸಾವನ್ನಪ್ಪಿ ಎರಡು ವರ್ಷ ಕಳೆದಿವೆ. ಪುನಿತ್ ನೆನೆಪು ಅಭಿಮಾನಿಗಳ ಹೃದಯದಿಂದ ಇನ್ನು ಮಾಸಿಲ್ಲ. ಪುನಿತ್ ನೆನಪಿಗಾಗಿ ಅಭಿಮಾನಿಗಳು ನಾನಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.ನಗರದಲ್ಲಿನ ಟ್ಯಾಟೋ ಕಲಾವಿದ ಯುವಕನೊಬ್ಬ ಪುನಿತ್ ನೆನಪಿಗಾಗಿ 300ಕ್ಕೂ ಹೆಚ್ಚು ಯುವಕರಿಗೆ ಪುನಿತ್ ಭಾವಚಿತ್ರ, ಪುನಿತ್ ಹೆಸರು ಇರುವ ಟ್ಯಾಟೋಗಳನ್ನು ಉಚಿತವಾಗಿ ಹಾಕುತ್ತಿದ್ದಾರೆ.
ಮೂಲಕ ಪುನಿತ್ ಇನ್ನು ನಮ್ಮಂಥ ಅಭಿಮಾನಿಗಳ ಸ್ಮೃತಿಪಟಲದಲ್ಲಿ ಜೀವಂತವಾಗಿದ್ದಾರೆ ಎಂದು ತೋರಿಸಿಕೊಡುತ್ತಿದ್ದಾರೆ.ಇಲ್ಲಿನ ಬಸವಣ್ಣ ವೃತ್ತದಲ್ಲಿರುವ ಹನುಮಾನ್ ಟ್ಯಾಟೋದ ರಾಜು ಎಂಬ ಯುವಕ ಪುನಿತ್ ರಾಜ್ ಅವರ ಎರಡನೇ ವರ್ಷದ ಪುಣ್ಯತಿಥಿ ಅಂಗವಾಗಿ ಅ.29ರಿಂದ 31ರವರೆಗೆ ನಾಲ್ಕು ದಿನಗಳ ಕಾಲ ಯುವಕರಿಗೆ ಉಚಿತ ಟ್ಯಾಟೋ ಹಾಕುತ್ತಿದ್ದಾರೆ.
ಸಾಮಾನ್ಯ ದಿನಗಳಲ್ಲಿ ಒಂದು ಟ್ಯಾಟೋ ಹಾಕಲು ಒಂದರಿಂದ ಒಂದುವರೆ ಸಾವಿರ ರೂಪಾಯಿ ಪಡೆದುಕೊಳ್ಳುವ ಈ ಯುವಕ, ನಾಲ್ಕು ದಿನಗಳ ಕಾಲ ಪುನಿತ್ ನೆನಪಿಗಾಗಿ ಯುವಕರಿಗೆ 3ರಿಂದ 4 ಲಕ್ಷ ರೂಪಾಯಿ ಮೌಲ್ಯದ ಉಚಿತ ಟ್ಯಾಟ್ ಮತ್ತು ಬ್ಲಡ್ ಆಟರ್್ ಮಾಡಿಕೊಡುವುದಾಗಿ ಹೇಳಿದ್ದಾರೆ.
`ಒಂದು ಟ್ಯಾಟೋ ಹಾಕಲು ಸುಮಾರು ಅರ್ಧ ಗಂಟೆ ಹಿಡಿಯುತ್ತದೆ. ಹೀಗಾಗಿ ಈಗಾಗಲೆ 150 ಜನರಿಗೆ ಟೋಕನ್ ನೀಡಲಾಗಿದೆ. 150 ಜನ ಮುಗಿದ ಬಳಿಕ ಮತ್ತೆ ಅಭಿಮಾನಿಗಳು ಟ್ಯಾಟೋ ಹಾಕಿಸಿಕೊಳ್ಳಲು ಬಂದರೆ ಮತ್ತೆ ಟೋಕನ್ ನೀಡುತ್ತೇನೆ’ ಎಂದು ರಾಜು ಹೇಳಿದರು.
ಪುನಿತ್ ರಾಜ್ ಅವರ ಅಭಿಮಾನಿಗಳು ತಮ್ಮ ರಕ್ತ ತಂದುಕೊಟ್ಟರೆ ಬೀಳಿ ಹಾಳೆಯ ಮೇಲೆ ಪುನಿತ್ ಅವರ ಬ್ಲಟ್ ಆಟರ್್ ಮಾಡಿಕೊಡಲಾಗುವುದು. ಇದಕ್ಕೆ ಯಾವುದೇ ಶುಲ್ಕ ಪಡೆಯುವುದಿಲ್ಲ ಎಂದು ಟ್ಯಾಟೋ ಕಲಾವಿದ ರಾಜ್ ಹೇಳಿದರು.


