ಗಂಗಾವತಿ : ಅಂಗನವಾಡಿ ಕೇಂದ್ರದ ಸೀಲಿಂಗ್ (ಛತ್ತು) ಕುಸಿದು ಬಿದ್ದು ನಾಲ್ಕು ಮಕ್ಕಳು ಗಾಯಗೊಂಡಿರುವ ಘಟನೆ ನಗರಸಭೆಯ ವ್ಯಾಪ್ತಿಯ 7ನೇ ವಾಡರ್್ ಮಹೆಬೂಬನಗರದ 7ನೇ ಅಮಗನವಾಡಿ ಕೇಂದ್ರದಲ್ಲಿ ಸೋಮವಾರ ಸಂಭವಿಸಿದೆ. ಘಟನೆಯಲ್ಲಿ ನಾಲ್ಕರಿಂದ ಐದು ವರ್ಷದೊಳಗಿನ ಅಮಾನ್ ಸೈಯದ್, ಮದನಾಲ್ ದೌವಲ್ ಮೊಹಮ್ಮದ್, ಮತ್ತು ಮನ್ವಿತಾ, ಸುರಕ್ಷಾ (ತಂದೆ ಮಂಜುನಾಥ) ಎಂದು ಗುರುತಿಸಲಾಗಿದೆ. ಗಾಯಕ್ಕೀಡಾದ ಮಕ್ಕಳನ್ನು ಸ್ಥಳಿಯರು ತಕ್ಷಣ ಸಕರ್ಾರಿ ಉಪ ವಿಭಾಗ ಆಸ್ಪತ್ರೆಗೆ ಸೇರಿಸಿದ್ದಾರೆ.
ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿವೆ. ಕಳೆದ ಮೂರು ದಿನಗಳ ರಜೆಯ ಬಳಿಕ ಸೋಮವಾರ ಎಂದಿನಂತೆ ಅಂಗನವಾಡಿ ಕೇಂದ್ರ ಆರಂಭವಾಗಿದೆ. ಕೇಂದ್ರದ ಶಿಕ್ಷಕಿ ಹಸೀನಾ ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ ಪಾಠ ಮಾಡುತ್ತಿರುವಾಗ ಕಟ್ಟಡದ ಸೀಲಿಂಗ್ ಕುಸಿದು ಬಿದ್ದಿದೆ.
ಕೇಂದ್ರದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಕ್ಕಳಿದ್ದರು. ಆದರೆ ನಾಲ್ಕು ಮಕ್ಕಳ ಮೇಲೆ ಸೀಲಿಂಗ್ ಕುಸಿದು ಬಿದ್ದ ತೀವ್ರತೆಗೆ ಮಕ್ಕಳಿಗೆ ಗಾಯವಾಗಿದೆ. ಮಕ್ಕಳಿಗೆ ಸಣ್ಣಗಾಯಗಳಾಗಿದ್ದು, ಒಂದು ಮಗುವಿಗೆ ಎಕ್ಸರೆ ಮಾಡಿಸಲಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಮಕ್ಕಳಿಗೆ ಚಿಕಿತ್ಸೆ ನೀಡಿದ ಮಕ್ಕಳ ತಜ್ಞವೈದ್ಯ ಅಮರೇಶ ಅರಳಿ ತಿಳಿಸಿದ್ದಾರೆ.
ಸತಕಾರಿ ಆಸ್ಪತ್ರೆಗೆ ಮಕ್ಕಳನ್ನು ದಾಖಲಿಸಿರುವ ಮಾಹಿತಿ ತಿಳಿಯುತ್ತಿದ್ದಂತೆಯೆ ನಗರಸಭೆಯ ಅಧ್ಯಕ್ಷ ಮೌಲಸಾಬ್, ವಾರ್ಡ್ ಸದಸ್ಯ ಮನೋಹರಸ್ವಾಮಿ, ಸಿಡಿಪಿಒ ಜಯಶ್ರೀ ದೇಸಾಯಿ, ಸೂಪರವೈಸರ್ ಚಂದ್ರಮ್ಮ ಸೇರಿದಂತೆ ನಗರಸಭೆ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.


