ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಟದ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಸ್ಟಾಪ್ ವಾಚ್‌ಗಳನ್ನು ಬಳಸುವುದಾಗಿ ಸೋಮವಾರ ಪ್ರಕಟಿಸಿದೆ.
ಸ್ಟಾಪ್ ವಾಚ್‌ಗಳ ಬಳಕೆ ಇದೇ ದಿನಾಂಕ ೧೨(ಮಂಗಳವಾರ) ಬಾರ್ಬಡಾಸ್‌ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆAಡ್ ನಡುವಿನ ಮೊದಲ ಟಿ೨೦ ಪಂದ್ಯದಿAದಲೇ ಪ್ರಾರAಭವಾಗಲಿದೆಯೆAದೂ ಅದು ಖಚಿತ ಪಡಿಸಿದೆ.
೨೦೨೩ರ ಡಿಸೆಂಬರ ಹಾಗೂ ೨೦೨೪ರ ಎಪ್ರಿಲ್ ನಡುವಿನ ಅವಧಿಯಲ್ಲಿ ನಡೆಯಲಿರುವ ಸುಮಾರು ೫೯ ಟಿ೨೦ ಹಾಗೂ ಏಕದಿನ ಅಂತಾರಾಷ್ಟಿçÃಯ ಪಂದ್ಯಗಳಲ್ಲಿ ಸ್ಟಾಪ್ ವಾಚ್‌ಗಳನ್ನು ಬಳಸಲಾಗುವುದು. ಕಳೆದ ತಿಂಗಳು ಅಹಮದಾಬಾದ್‌ನಲ್ಲಿ ಸಭೆ ಸೇರಿದ್ದ ಐಸಿಸಿ ಹಿರಿಯ ಕಾರ್ಯಕಾರಿ ಸಮಿತಿ ಪರೀಕ್ಷಾರ್ಥವಾಗಿ ಸ್ಟಾಪ್ ವಾಚ್‌ಗಳ ಬಳಕೆಗೆ ಒಪ್ಪಿಗೆ ನೀಡಿತ್ತು.
ಸ್ಟಾಪ್ ವಾಚ್‌ಗಳ ಬಳಕೆ ಎರಡು ಓವರ್‌ಗಳ ನಡುವಿನ ಸಮಯ ವ್ಯರ್ಥವಾಗುವುದನ್ನು ತಡೆಯುವ ಉದ್ದೇಶ ಹೊಂದಿರುತ್ತದೆ. ಇದರನ್ವಯ ಒಂದು ಓವರ್ ಮುಗಿಸಿದ ಸರಿಯಾಗಿ ಅರವತ್ತು ಸೆಕೆಂಡುಗಳ ಒಳಗಾಗಿ ಮುಂದಿನ ಓವರನ್ನು ಬೌಲ್ ಮಾಡಲು ಸಿದ್ಧವಾಗಿರಬೇಕು. ಇದರಲ್ಲಿ ತಪ್ಪುವ ತಂಡಕ್ಕೆ ಎರಡು ಸಲ ಎಚ್ಚರಿಕೆ ನೀಡಲಾಗುವುದು. ಮೂರನೇ ಸಲವೂ ಇದೇ ತಪ್ಪೆಸಗಿದಲ್ಲಿ ಫೀಲ್ಡಿಂಗ್ ತಂಡ ಶಿಕ್ಷೆಗೆ ಒಳಗಾಗಲಿದ್ದು
ಅದು ದಂಡದ ರೂಪದಲ್ಲಿ ಎದುರಾಳಿಗಳಿಗೆ ಐದು ಓಟ ನೀಡಬೇಕಾಗುತ್ತದೆ.