ಕ್ಯಾನ್ ಬೇರಾ : ಆಸ್ಟ್ರೇಲಿಯಾ ದಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವುದನ್ನು ನಿಷೇಧಿಸುವ ಮಸೂದೆಯನ್ನು ಸಂಸತ್ತಿನ ಕೆಳಮನೆಯಲ್ಲಿ ಪ್ರಧಾನಿ ಅಂಥೋಣಿ ಅಲ್ಬನೀಸ್ ಗುರುವಾರ ಮಂಡಿಸಿದರು.
ಎಕ್ಸ್, ಟಿಕ್‌ಟಾಕ್, ಫೇಸ್‌ಬುಕ್ ಹಾಗೂ ಇನ್‌ಸ್ಟಾçಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಿಂದ ಮಕ್ಕಳಿಗಾಗುವ ಹಾನಿ ತಪ್ಪಿಸಲು ಇಂತಹ ನಿಷೇಧ ಹೇರಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಈ ಶಾಸನ ಜಾರಿಗೆ ಬಂದಾಗ ಜಗತ್ತಿನಲ್ಲೇ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸಿದ ಮೊದಲ ದೇಶವಾಗಲಿದೆ.
17 ಪುಟಗಳ ದಾಖಲೆ ಇರುವ ಹೊಸ ಶಾಸನ ನಿಷೇಧಕ್ಕೆ ಚೌಕ್ಕಟ್ಟು ಒದಗಿಸುತ್ತದೆ. ಮುಂದಿನ ವಾರ ಅದು ಸೆನೆಟ್‌ನಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಆದರೆ ಶಾಸನ ಹೊರಬಂದ ೧೨ ತಿಂಗಳವರೆಗೆ ಅದು ಜಾರಿಯಾಗುವುದಿಲ್ಲ.
ಟೆಕ್ ಕಂಪನಿಗಳು ಶಾಸನದ ಕಾನೂನುಗಳನ್ನು ಅನುಸರಿಸದಿದ್ದಲ್ಲಿ 50 ಮಿಲಿಯನ್ ಆಸ್ಟ್ರೇಲಿಯಾ ಡಾಲರ್ ದಂಡ ಎದುರಿಸಬೇಕಾಗುತ್ತದೆ. ಹಾಗಿದ್ದರೂ ಮಕ್ಕಳಿಗೆ ಕಡಿಮೆ ಅಪಾಯದ ಸೇವೆಗಳನ್ನು ಒದಗಿಸುವಂತಹ ಸಾಮಾಜಿಕ ತಾಣಗಳನ್ನು ರಚಿಸುವುದಿದ್ದರೆ ಅಂತಹ ತಾಣಗಳಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ ಈ ರೀತಿಯ ತಾಣಗಳಿಗೆ ಮಾನದಂಡವನ್ನು ಇನ್ನೂ ರೂಪಿಸಿಲ್ಲ. ಅದೇನಿದ್ದರೂ ಆಸ್ಟ್ರೇಲಿಯಾದಲ್ಲಿನ ಸಾಮಾಜಿಕ ಮಾಧ್ಯಮ ತಾಣಗಳು 21 ನೇ ಶತಮಾನದ ಸವಾಲುಗಳಿಗೆ 20 ನೇ ಶತಮಾನದ ಪ್ರತಿಕ್ರಿಯೆ ಎಂದು ಟೀಕಿಸಿವೆ.