ಕೋಲ್ಕತ್ತಾ : ಪಶ್ಚಿಮಬಂಗಾಳದ ರಾಜಧಾನಿ ಕೋಲ್ಕತ್ತಾ ಐತಿಹಾಸಿಕ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಐದು ಲಕ್ಷ ಜನರು ಏಕತ್ರರಾಗಿ ಭಾನುವಾರ ಭಗವದ್ಗೀತೆ ಪಠಣ ಮಾಡುವುದರೊಂದಿಗೆ ಹಿಂದೂಗಳ ಬೃಹತ್ ಪ್ರದರ್ಶನ ನಡೆಯಿತು.
ರಾಜ್ಯಪಾಲ ಸಿ.ವಿ. ಆನಂದ ಬೋಸ್, ಬಿಜೆಪಿಯ ಹಿರಿಯ ನಾಯಕರು, ಸಾಧುಗಳು ಮತ್ತು ಸಾಧ್ವಿಗಳು ಸೇರಿದಂತೆ ಲಕ್ಷಾಂತರ ಜನರು ಭಗವದ್ಗೀತೆ ಪಠಣವು ಸದ್ಯದಲ್ಲೇ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎದುರಾಳಿ ತೃಣಮೂಲ ಕಾಂಗ್ರೆಸ್ಸಿಗೆ ರಾಜಕೀಯ ಸಾಮರ್ಥ್ಯ ತೋರಿಸುವ ಕಾರ್ಯಕ್ರಮವಾಗಿಯೂ ಹೊರಹೊಮ್ಮಿತು. ಸಮಾಜ ಮತ್ತು ಮಾತೃಭೂಮಿಯ ಕಡೆಗೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಲು ನಾವು ಶ್ರೀಮದ್ ಭಗವದ್ಗೀತೆಯಿಂದ ಪ್ರೇರಣೆ, ಸ್ಫೂರ್ತಿ ಮತ್ತು ಮಾರ್ಗದರ್ಶನವನ್ನು ಪಡೆಯುತ್ತೇವೆ. ಬದುಕಿನಲ್ಲಿ ಅಸ್ತಿತ್ವ ಕಂಡುಕೊಳ್ಳಲು ಭಗವದ್ಗೀತೆ ಕಾಲಾತೀತ ಮಾರ್ಗದರ್ಶಿ ಎಂದು ರಾಜ್ಯಪಾಲ ಬೋಸ್ ಅಭಿಪ್ರಾಯಪಟ್ಟರು.
ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ರಾಜ್ಯ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ, ಸಂಸದರಾದ ಸುಕಾಂತ ಮಜುಂದಾರ್ ಮತ್ತು ಲಾಕೆಟ್ ಚಟರ್ಜಿ,ಮಾಜಿ ಸಂಸದರಾದ ದಿಲೀಪ್ ಘೋಷ್ ಮತ್ತುರೂಪಾ ಗಂಗೂಲಿ ಮತ್ತು ಹಿರಿಯ ನಾಯಕ ರಾಹುಲ್ ಸಿನ್ಹಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಿಜೆಪಿ ಪ್ರಮುಖರು. ಇವರಲ್ಲದೆ, ಸಂತರಾದ ಸ್ವಾಮಿ ಪ್ರದೀಪ್ತಾನಂದ ಮಹಾರಾಜ್ ಧೀರೇಂದ್ರ ಶಾಸ್ತ್ರಿ ಮತ್ತು ಸಾಧ್ವಿ ಋತಂಭರಾ ಅವರೂ ಭಾಗವಹಿಸಿದ್ದರು.ತೃಣಮೂಲ ಕಾಂಗ್ರೆಸ್‌ಗೆ ಸವಾಲು ಮಾಜಿ ಸಂಸದ ದಿಲೀಪ್ ಘೋಷ್ ಅವರು ಸಾಮೂಹಿಕ ಗೀತಾ ಪಠಣ ಆಯೋಜಿಸುವಂತೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದರು.


