ಕೋಲಾರ : ಹೆಲ್ಮೆಟ್ ಹಾಕುವ ಮುನ್ನ ಒಂದು ಬಾರಿ ಅದನ್ನು ಪರಿಶೀಲನೆ ಮಾಡಿ. ಯಾಕೆಂದರೆ ಹೆಲ್ಮೆಟ್ ಒಳಗೆ ಹಾವುಗಳು ಅಡಗಿ ಕುಳಿತಿರುತ್ತದೆ. ಇಂತಹ ಅನೇಕ ಘಟನೆಗಳು ಕೆಲವು ಕಡೆ ನಡೆದಿರುವುದನ್ನು ಕಾಣಬಹುದು. ಯಾವುದೋ ಆಲೋಚನೆಯಲ್ಲಿ ಹೆಲ್ಮೆಟ್ನ್ನು ಗಾಡಿಯಲ್ಲಿ ಇಟ್ಟು ನಮ್ಮ ಕೆಲಸಕ್ಕೆ ಹೋಗುತ್ತವೆ. ಮತ್ತೆ ವಾಪಸ್ ಬರುವಾಗ ಒಂದು ಬಾರಿ ಹೆಲ್ಮೆಟ್ನ್ನು ಪರಿಶೀಲನೆ ಮಾಡಿ. ಇಲ್ಲದಿದ್ದರೆ ಅಪಾಯ ಖಂಡಿತ. ಇಂತಹ ಒಂದು ಕೋಲಾರ ನಗರದ ಕೀಲುಕೋಟೆ ಬಡಾವಣೆಯ ಮನೆಯೊಂದರ ಬಳಿ ಹೆಲ್ಮೆಟ್ ನಲ್ಲಿ ನಾಗರಹಾವು ಬೆಚ್ಚಗೆ ಅವಿತು ಕುಳಿತ ಘಟನೆ ನಡೆದಿದೆ.
ಬೈಕ್ ಸವಾರ ಏನೋ ಜಾಗರೂಕತೆಯಿಂದ ಹೆಲ್ಮೆಟ್ ತೆಗೆದು ನೋಡಿದಾಗ ಆಗಾ ಅದರ ಒಳಗೆ ಹಾವು ಹೋಗಿದೆ ಎಂದು ಗೊತ್ತಾ ತಕ್ಷಣ ಉರಗ ತಜ್ಞರಿಗೆ ತಿಳಿಸುತ್ತಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ದುನಿಯಾ ವಿಜಿ ಆಗಾ ಅದರ ಒಳಗೆ ನಾಗರ ಹಾವಿನ ಮರಿಯನ್ನು ಪತ್ತೆ ಮಾಡಿ, ಹೊರಗೆ ತೆಗೆದಿದ್ದಾರೆ. ಬೈಕ್ ನಿಲ್ಲಿಸಿ ಮನೆಯ ಮುಂದೆ ಹೆಲ್ಮೆಟ್ ಇಟ್ಟ ಕೆಲವೇ ಕ್ಷಣಗಳಲ್ಲಿ ಹಾವು ಸೇರಿಕೊಂಡಿದ್ದು ಇದು ನಾಗರ ಹಾವಿನ ಸಣ್ಣ ಮರಿ ಆದರೆ ಇದರ ಕಡಿತ ದೊಡ್ಡ ಹಾವಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಿದ್ದಾರೆ. ಇದು ದೊಡ್ಡ ಗಾತ್ರದ ನಾಗರಹಾವುಗಳಿಂತ ಹೆಚ್ಚು ವಿಷವನ್ನು ಉತ್ಪಾದಿಸಿಕೊಂಡಿರುತ್ತದೆ ಎಂದು ತಿಳಿಸಿದ್ದಾರೆ.