ಕೋಲಾರ ; ಇತ್ತಿಚ್ಚಿನ ದಿನಗಳಲ್ಲಿ ಈಜಲು ಹೋಗಿ ಸಾವನಪ್ಪಿದ ಘಟನೆಗಳು ಅತಿ ಹೆಚ್ಚಾಗಿದ್ದು ಜನಸಾಮನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಅಗತ್ಯವಿದೆ ಎಂದು ಹಲವು ಹಿರಿಯರ ಮಾತು.
ಹಬ್ಬ,ಇನ್ನಿತರ ಶುಭ ದಿನಗಳ ಸಂದರ್ಭದಲ್ಲಿ ಬೀಚ್, ಹಳ್ಳ,ನದಿಯ ಬದಿಗಳಲ್ಲಿ ಯುವಕರ ದಿಂಡು ಬರುತ್ತಿರುವ ಸಂಧರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ನೀರಲ್ಲಿ ಮೃತಪಟ್ಟ ಘಟನೆಗಳು ನಡೆದಿದ್ದರೂ ಆಡಳಿತ ಅಧಿಕಾರಿಗಳ ನೀರಲಕ್ಷ್ಯದಿಂದ ಇಂತಹ ಘಟನೆನೆಗಳು ನಡೆಯುತ್ತಿರುವುದು ವಿಪರ್ಯಾಸ.
ಯುಗಾದಿ ಹಬ್ಬ ವರ್ಷತೊಡಕಿನ ನಂತರ ಕ್ವಾರಿ ಹಳ್ಳದಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರ ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲ್ಯಪ್ಪನಹಳ್ಳಿ ಬಳಿ ನಡೆದಿದೆ. ಸಹೋದರರಾದ ಪವನ್ಕುಮಾರ್ ಮತ್ತು ಮಧುಕುಮಾರ್ ಮೃತ ರ್ದುದೈವಿಗಳು. ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋಗಿ ಅಣ್ಣನೂ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.