ಕೋಲಾರ : ಬಿಸಿಯೂಟ ಸೇವಿಸಿ ಕೈ ತೊಳೆಯಲು ಹೋಗಿದ್ದ ಬಾಲಕ ಶಾಲೆಯ ನೀರಿನ ತೊಟ್ಟಿಯಲ್ಲಿ ಸಾವನಪ್ಪಿದ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕಡದನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಗ್ರಾಮದ ಬಾಬು ಹಾಗೂ ಗೀತಾ ದಂಪತಿಯ ಮಗನಾದ ಮೂರನೇ ತರಗತಿ ಸುರೇಂದ್ರ (9) ಎಂದು ತಿಳಿದಿದೆ.
ಶಿಕ್ಷಕ ಶೇಖರ್ ಬಾಬು ಹಾಗೂ ಅಡುಗೆ ಸಹಾಯಕಿ ವಸಂತಮ್ಮ ನಿರ್ಲಕ್ಷದಿಂದ ಈ ಘಟನೆ ನಡೆದಿದ್ದು ಶಾಲೆಯ ನೀರಿನ ಸಂಪ್ ಮುಚ್ಚದ ಹಿನ್ನೆಲೆ ದುಘ೯ಟನೆ ನಡೆದಿದೆ.
ಸ್ಥಳಕ್ಕೆ ಶಾಸಕ ನಂಜೇಗೌಡ, ತಹಸೀಲ್ದಾರ್ ರೂಪ,ಬಿಇಒ ಕೆಂಪಯ್ಯ ಸೇರಿದಂತೆ ಹಲವರು ಭೇಟಿನೀಡಿದ್ದು ಶಿಕ್ಷಕ ಹಾಗೂ ಅಡುಗೆ ಸಹಾಯಕಿ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
.


