ಕೊಲಂಬೊ : ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಟೀಮ್ ಇಂಡಿಯಾಗೆ ಸವಾಲಿನ ಮೊತ್ತ ಟಾರ್ಗೆಟ್ ನೀಡಿತ್ತು. ಶ್ರೀಲಂಕಾ ನೀಡಿರೋ 249 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 138 ರನ್‌ಗಳಿಗೆ ಆಲೌಟ್ ಆಗಿದೆ.
ಭಾರತ ತಂಡದ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ ಎಂದಿನಂತೆ ಹೊಡಿಬಡಿ ಆಟಕ್ಕೆ ಮುಂದಾದರು. ತಾನು ಆಡಿದ 20 ಬಾಲ್ನಲ್ಲಿ 1 ಸಿಕ್ಸರ್, 6 ಫೋರ್ ಸಮೇತ 35 ರನ್ ಚಚ್ಚಿದ್ರು. ವಾಷಿಂಗ್ಟನ್ ಸುಂದರ್ 30 ರನ್ ಸಿಡಿಸಿದ್ದು ಬಿಟ್ಟರೆ, ಕೊಹ್ಲಿ 20 ರನ್ ಗಳಿಸಿದ್ರು.
ವಿರಾಟ್ ಕೊಹ್ಲಿ 3ನೇ ಪಂದ್ಯದಲ್ಲೂ ಸರಿಯಾಗಿ ಆಡಲಿಲ್ಲ. ಈ ಪಂದ್ಯದಲ್ಲೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು. ಹೊಡಿಬಡಿ ಆಟ ಆಡಲು ಹೋದ ಕೊಹ್ಲಿ 4 ಫೋರ್ ಬಾರಿಸಿ ಕೇವಲ 20 ರನ್ ಚಚ್ಚಿ ವಿಕೆಟ್ ಕೈ ಚೆಲ್ಲಿದ್ರು. ಎಲ್ಬಿಡಬ್ಲ್ಯೂಗೆ ಬಲಿಯಾದರು ಕೊಹ್ಲಿ.
ಟೀಂ ಇಂಡಿಯಾ ಈ ಪಂದ್ಯಕ್ಕೆ ಬರೋಬ್ಬರಿ 9 ಬ್ಯಾಟರ್ಗಳನ್ನು ಕಣಕ್ಕಿಳಿಸಿತ್ತು. ಆದರೆ ರೋಹಿತ್ ಶರ್ಮಾ ಹೊರತುಪಡಿಸಿ, ಶ್ರೀಲಂಕಾದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ತನ್ನ ಶಕ್ತಿ ತೋರಿಸಲು ಸಾಧ್ಯವಾಗಲಿಲ್ಲ.ಆರಂಭಿಕ ಶುಭ್ಮನ್ ಗಿಲ್ ಕೇವಲ 6 ರನ್ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಕೂಡ 20 ರನ್, ರಿಷಬ್ ಪಂತ್ ಕೇವಲ 6 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಉಳಿದಂತೆ ಇಡೀ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿರುವ ಶ್ರೇಯಸ್ ಅಯ್ಯರ್ 8 ರನ್ ಗಳಿಸಿ ಔಟಾದರೆ, ಅಕ್ಷರ್ ಪಟೇಲ್ 2 ರನ್, ರಿಯಾನ್ ಪರಾಗ್ 15 ರನ್‌ಗಳಿಗೆ ಸುಸ್ತಾದರು. ಶಿವಂ ದುಬೆ ಕೇವಲ 9 ರನ್‌ಗಳಿಗೆ ಆಟ ಮುಗಿಸಿದರೆ, ಕೊನೆಯಲ್ಲಿ ಹೋರಾಟ ನೀಡಿದ ಸುಂದರ್ 30 ರನ್ಗಳ ಕಾಣಿಕೆ ನೀಡಿದರು. ಇನ್ನು ಈ ಪಂದ್ಯದಲ್ಲಿ ಶುಭ್ಮನ್ ಗಿಲ್ ಬಿಟ್ಟರೆ ಉಳಿದೆಲ್ಲ ಬ್ಯಾಟ್ಸ್ಮನ್ಗಳು ಸ್ಪಿನ್ನರ್ಗಳಿಗೆ ಬಲಿಯಾದರು.
ಕಳೆದ ಮೂರು ಪಂದ್ಯಗಳಲ್ಲೂ ಕೊಹ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವೇನು ನೀಡಿಲ್ಲ. ಮೊದಲ ಪಂದ್ಯದಲ್ಲಿ 24 ರನ್ ಮತ್ತು 2ನೇ ಪಂದ್ಯದಲ್ಲಿ ಕೇವಲ 14 ರನ್ ಗಳಿಸಿದ್ರು. ಮೂರು ಪಂದ್ಯಗಳಲ್ಲೂ ಕೇವಲ 58 ರನ್ ಕಲೆ ಹಾಕಿದ್ದಾರೆ. ಅಭಿಮಾನಿಗಳು ಕೊಹ್ಲಿ ತನ್ನ ಜವಾಬ್ದಾರಿಯನ್ನೇ ಮರೆತರಾ? ಮೂರು ಪಂದ್ಯಗಳಲ್ಲೂ ಪದೇ ಪದೇ ಅದೇ ತಪ್ಪು ಮಾಡ್ತಿರೋದ್ಯಾಕೆ? ಅನ್ನೋ ಪ್ರಶ್ನೆಗಳು ಕೇಳಲು ಆರಂಭಿಸಿದ್ದಾರೆ.


