ಕೊಪ್ಪಳ : ಕೊಪ್ಪಳ ಜಿಲ್ಲೆಯ ಗುಳದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಕ್ರೀಡಾಕೂಟಕ್ಕೆ ತೆರಳಿ ಮರಳುತ್ತಿರುವಾಗ RTO ಅಧಿಕಾರಿ ರಾಟ್ಸ್ ಮಧ್ಯೆ ಕೈ ತೋರಿಸಿ ನಿಲ್ಲಿಸಲು ಸನ್ನೆಮಾಡಿದ್ದಾಗ ಟಾಟಾ ACE ವಾಹನ ಚಾಲಕ ತಟ್ಟನೆ ಬ್ರೇಕ್ ಹಾಕಿದ ಪರಿಣಾಮ ರಸ್ತೆ ಮದ್ಯದಲ್ಲಿ ಟಾಟಾ ACE ಪಲ್ಟಿಯಾಗಿ 25 ಮಕ್ಕಳಿಗೆ ಗಾಯಗೊಂಡ ಘಟನೆ ಸಂಭವಿಸಿದೆ.
ಮಕ್ಕಳು ಕ್ರೀಡಾಕೂಟಕ್ಕೆ ತೆರಳಿ ಮರಳುವಾಗ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಟಾಟಾ ACE ವಾಹನದಲ್ಲಿ ಸಂಚರಿಸುತಿರುತ್ತಿದ್ದರೆಂದು ತಿಳಿದುಬಂದಿದೆ. RTO ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಮಕ್ಕಳ ಪೋಷಕರು ಧರ್ಮದೇಟು ನೀಡಲು ಯತ್ನಿಸಿದ್ದು ಕೊಪ್ಪಳ ಜಿಲ್ಲಾಸ್ಪತ್ರೆಗೆ ಗಾಯಾಳು ಮಕ್ಕಳು ದಾಖಲಿಸಲಾಗಿದೆ.