ಕೊಪ್ಪಳ : ಸ್ಕೂಲ್ ಫೀ ತುಂಬಿಲ್ಲ ಎಂದು ಶಾಲೆಯಲ್ಲಿಯೇ ಮಕ್ಕಳನ್ನು ಇರಿಸಿಕೊಂಡ ಆರೋಪ ಕೊಪ್ಪಳದ ನಿವೇದಿತಾ ಶಾಲೆಯಲ್ಲಿ ಕೇಳಿಬಂದಿದೆ. ಸ್ಕೂಲ್ ಫೀ ತುಂಬದ ಹಿನ್ನಲೆಯಲ್ಲಿ ಶಾಲೆಯ ಮುಖ್ಯಸ್ಥರಾದ ನೀತಿಶ್ ಪುಲಸ್ಕರ್,ಶಾರದಾಭಾಯಿ ಪುಲಸ್ಕರ್ ವಿರುದ್ಧ ಪಾಲಕರು ಮಕ್ಕಳನ್ನು ಮನೆಗೆ ಕಳುಹಿಸದೇ ಶಾಲೆಯಲ್ಲಿಯೇ ಇಟ್ಟುಕೊಂಡಿದ್ದರೆಂದು ಆರೋಪಿಸಿದ್ದಾರೆ.
ಶಾಲೆ ಬಿಟ್ಟ ಬಳಿಕ ಒಂದೂವರೆ ಗಂಟೆ 20 ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಯಲ್ಲಿಯೇ ಇರಿಸಿಕೊಂಡಿದ್ದು ಸಮಯವಾದರೂ ಮಕ್ಕಳು ಬಾರದ ಹಿನ್ನಲೆಯಲ್ಲಿ ಶಾಲೆಗೆ ಬಂದು ಪ್ರಶ್ನೆ ಮಾಡಿದ ಸಂದಭದಲ್ಲಿ ಈ ವಿಚಾರ ತಿಳಿದಿದೆ.ಈ ವೇಳೆ ಶಾಲಾ ಮುಖ್ಯಸ್ಥರೊಂದಿಗೆ ಮಕ್ಕಳ ಪೋಷಕರು ವಾಗ್ವಾದ ನಡೆಸಿದ್ದು ಫೀಸ್ ಕಟ್ಟದ್ದಕ್ಕೆ ಇರಿಸಿಕೊಂಡಿದ್ದೇವೆ ಎಂದ ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ.ನಾವು ಫೀಸ್ ಕಟ್ಟಲು ಪಾಲಕರಿಗೆ ಮಾಹಿತಿ ನೀಡಿದ್ದೇವೆ ಅವರು ಬಂದ ಬಳಿಕ ಅವರಿಗೆ ಹೇಳಿ ಮಕ್ಕಳನ್ನು ಬಿಡುತ್ತೇವೆ ಎಂದ ಶಾಲಾ ಮುಖ್ಯಸ್ಥರು ಕೆಲವು ಪಾಲಕರ ವಾಗ್ವಾದದ ಬಳಿಕ ಅಲ್ಲಿ ನೆರೆದ ಪೋಷಕರಲ್ಲಿ ತಿಳಿಸಿದ್ದಾರೆ.