Friday, November 22, 2024
Flats for sale
Homeಕ್ರೈಂಕೊಪ್ಪಳ : ಪತ್ನಿಯ ತಲೆಗೆ ಕಲ್ಲು ಎತ್ತಿ ಹಾಕಿ ನೇಣಿಗೆ ಶರಣಾದ ಪತಿರಾಯ.

ಕೊಪ್ಪಳ : ಪತ್ನಿಯ ತಲೆಗೆ ಕಲ್ಲು ಎತ್ತಿ ಹಾಕಿ ನೇಣಿಗೆ ಶರಣಾದ ಪತಿರಾಯ.

ಕೊಪ್ಪಳ : ಪತಿ ಪತ್ನಿಯರ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆ ಕೊಪ್ಪಳ ತಾಲೂಕಿನ ಬುಡ್ಶೇಟ್ನಾಳ್ ಗ್ರಾಮದಲ್ಲಿ ನಡೆದಿದೆ.

ಪತಿಯಿಂದ ಕೊಲೆಯಾದ ಮಹಿಳೆಯನ್ನು ಲಕ್ಷ್ಮವ್ವ ವಾಲಿಕಾರ್(36) ಹಾಗೂ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ನಿಂಗಪ್ಪ ವಾಲಿಕಾರ್(40) ಎಂದು ತಿಳಿದುಬಂದಿದೆ.

ಹಣದ ವಿಷಯವಾಗಿ ಪತ್ನಿಯೊಂದಿಗೆ ನಿಂಗಪ್ಪ ಗಲಾಟೆ ಮಾಡಿಕೊಂಡಿದ್ದು ಗಲಾಟೆ ತೀವ್ರ ತಾರಕಕ್ಕೆ ಏರಿ ತಡರಾತ್ರಿ ಪತಿ ನಿಂಗಪ್ಪ ಪತ್ನಿ ಲಕ್ಷ್ಮವ್ವ ಮಲಗಿದ್ದ ವೇಳೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆಂದು ಎನ್ನಲಾಗಿದೆ. ತೀವ್ರ ಗಾಯಗೊಂಡಿದ್ದ ಲಕ್ಷ್ಮವ್ವಳನ್ನು ಗ್ರಾಮಸ್ಥರು ಜಿಲ್ಲಾ ಆಸ್ಪತ್ರೆ ಗೆ ದಾಖಲಿಸಿದ್ದರು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಪತ್ನಿ ಲಕ್ಷ್ಮವ್ವ ಸಾವನ್ನಪ್ಪಿದ್ದಾಳೆ. ಅತ್ತ ಗಲಾಟೆ ಮಾಡಿಕೊಂಡ ನಿಂಗಪ್ಪ ಹೊರವಲಯ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular