ಕೊಡಗು : ತೆರೆದ ಬಾವಿಗೆ ಬಿದ್ದು ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಂಗಾಲ ಗ್ರಾಮದಲ್ಲಿ ನಿನ್ನೆ ನಡೆದಿದೆ.
ತೆರೆದ ಬಾವಿಗಳಿಗೆ ಹುಲಿ, ಚಿರತೆ, ಆನೆ ಸೇರಿ ಹಲವು ಅಪರೂಪದ ವನ್ಯಜೀವಿಗಳು ಬಿದ್ದು ಮೃತವಾಗುವ ಪ್ರಕರಣಗಳು ಆಗಾಗ್ಗೆ ವರದಿ ಯಾಗುತ್ತಿರುತ್ತವೆ. ಹಾಗಾಗಿ ಕಾಡಂಚಿನ ಗ್ರಾಮಗಳಲ್ಲಿರುವ ಇಂತಹ ತೆರೆದ ಬಾವಿಗಳಿಗೆ ಕಬ್ಬಿಣದ ಮೆಸ್ ಅನ್ನು ಮುಚ್ಚಿ, ಸುರಕ್ಷಿತ ಕ್ರಮದ ವ್ಯವಸ್ಥೆ ಕಡ್ಡಾಯವಾಗಬೇಕಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತೆರೆದ ಬಾವಿ ನಿರ್ಮಿಸಲಾಗಿತ್ತು. ಪಾಲೇಂಗಡ ಬಿದ್ದಪ್ಪ ಶಂಬು ಅವರ ಮನೆ ಮುಂದೆ ಘಟನೆ ನಡೆದಿದೆ. ಸುಮಾರು 48 ವಯಸ್ಸಿನ ಗಂಡಾನೆ ಮೃತಪಟ್ಟಿದೆ. ನಿನ್ನೆ ರಾತ್ರಿ 11 ಗಂಟೆ ಸಮಯದಲ್ಲಿ ಘಟನೆ ನಡೆದಿದೆ ತಿಳಿದು ಬಂದಿದೆ.